Tuesday, December 17, 2024

Latest Posts

ರೇಷನ್ ಕಾರ್ಡ್ ಮಹತ್ವದ ಬದಲಾವಣೆ…!

- Advertisement -

www.karnatakatv.net :ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿ ಎಲ್ಲಾ ಸೌಲಭ್ಯಗಳನ್ನು ಹೊಂದಿರೋ ಅನುಕೂಲಸ್ಥರೂ ಕೂಡ ಬಿಪಿಎಲ್ ಕಾರ್ಡ್ ನಡಿ ಪ್ರಯೋಜನ ಪಡೀತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೇಷನ್ ಕಾರ್ಡ್ ನ ಮಾನದಂಡಗಳನ್ನು ಬದಲಾಯಿಸೋದಕ್ಕೆ ಹೊರಟಿದೆ.

ಹೌದು, ಕೇಂದ್ರ  ಸರ್ಕಾರದ ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವವರಿಗೆ ರೇಷನ್ ವಿತರಣೆಗೆ ಯೋಜನೆ ರೂಪಿಸಿದೆ. ಇನ್ನು ಈ ಬಿಪಿಎಲ್ ಕಾರ್ಡ್ ಪಡೆಯೋದಕ್ಕೆ ವಾರ್ಷಿಕ ಆದಾಯ, ಮನೆ ಕುರಿತಾಗಿ ನಾನಾ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿ ರೇಷನ್ ಕಾರ್ಡ್ ಮಂಜೂರು ಮಾಡಲಾಗುತ್ತೆ. ಆದ್ರೆ ಈ ನಡುವೆ ಆರ್ಥಿಕವಾಗಿ ಸದೃಢವಿರೋ ಕುಟುಂಬಗಳೂ ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಸುಳ್ಳು ದಾಖಲೆಗಳನ್ನು ಸಲ್ಲಿಸಿ ಕಾರ್ಡ್ ಪಡೆದುಕೊಳ್ಳುತ್ತಿದ್ದಾರೆ. ಇದು ಬಡವರಿಗೆಂದೇ ರೂಪಿಸಲಾಗಿರೋ ಯೋಜನೆಯನ್ನೇ ಅರ್ಥಹೀನ ಮಾಡುತ್ತಿದೆ. ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿರೋ ಕೇಂದ್ರ ಸರ್ಕಾರ, ರೇಷನ್ ಕಾರ್ಡ್ ನ ಪಡೆಯಲು ನಿಗದಿಪಡಿಸಿದ್ದ ಮಾನದಂಡಗಳನ್ನು ಬದಲಾಯಿಸಲು ಸಿದ್ಧವಾಗಿದೆ.

ಸದ್ಯ ದೇಶದ 80 ಕೋಟಿ ಜನರು ಬಿಪಿಎಲ್ ಪ್ರಯೋಜನ ಪಡೆಯುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ 1.21 ಬಿಲಿಯನ್ ಜನ ಸಂಖ್ಯೆಯಲ್ಲಿ ಶೇಕಡಾ 66 ರಷ್ಟು ಮಂದಿ ಆಹಾರ ಭದ್ರತಾ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇವರಲ್ಲಿ ಉತ್ತಮ ಸ್ಥಿತಿಯಲ್ಲಿರುವವರೂ ಕೂಡ ಬಡವರಿಗಾಗಿ ಮೀಸಲಿಟ್ಟಿರೋ ಆಹಾರ ಧಾನ್ಯಗಳನ್ನ ಪಡೆಯುತ್ತಿರೋದು ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬರಲು ಕಾರಣವಾಗಿದೆ. ದೇಶದ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಿಪಿಎಲ್ ಕಾರ್ಡ್ ದಾರರಿಗೆ ಈ ಬಾರಿ ಕಠಿಣ ಮಾನದಂಡಗಳನ್ನು ರೂಪಿಸೋ ಮೂಲಕ ಸುಳ್ಳು ದಾಖಲೆ ನೀಡಿ ರೇಷನ್ ಪಡೆಯುತ್ತಿರುವವರಿಗೆ ಲಗಾಮು ಹಾಕಲಿದೆ. ಇನ್ನು ಹೊಸ ಮಾನದಂಡಗಳನ್ನು ಈಗಾಗಲೇ ರೂಪಿಸಲಾಗಿದ್ದು ಶೀಘ್ರವೇ ಜಾರಿಗೊಳಿಸುವ ನಿರೀಕ್ಷೆಯಿದೆ.

- Advertisement -

Latest Posts

Don't Miss