Saturday, July 12, 2025

Latest Posts

ಇತ್ತೀಚೆಗೆ ಡಿಕೆಶಿಗೆ ವೈರಾಗ್ಯ ಬಂದಂತೆ ಮಾತನಾಡುತ್ತಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿಯ ಮಯೂರ ಎಸ್ಟೇಟ್‌ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿದ್ದು, ಶಾಲಾ ಕಾಲೇಜು ನೇಮಕ, ಮನೆ ಜಮೀನು ವ್ಯಾಜ್ಯ ಸೇರಿದಂತೆ ವಿವಿಧ ಬೇಡಿಕೆ ಹೊತ್ತುಕೊಂಡ ಬಂದಿದ್ದ ಸಾರ್ವಜನಿಕರಿಗೆ ಸ್ಪಂದಿಸಿದ್ದಾರೆ.

ಬಳಿಕ ಮಾತನಾಡಿರುವ ಅವರು, ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ನಿಜಕ್ಕೂ ಬೇಸರದ ಸಂಗತಿ. ಇದು ಕೋವಿಡ್ ಲಸಿಕೆಯಿಂದ ಆಗುತ್ತಿದೆ ಎನ್ನುತ್ತಿರುವುದು ಬೇಜಾವಾಬ್ದಾರಿತನದ ಪರಮಾವಧಿ. ವಿಶ್ವದ 150 ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆ ಹೋಗಿದೆ. ಇಡೀ‌ ವಿಶ್ವವೇ ಭಾರತವನ್ನ ಕೊಂಡಾಡಿದೆ. ಆದ್ರೆ ಈ ರೀತಿ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಮಾಡುವ ಅಪಮಾನ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುದ್ಧದ ಸಮಯದಲ್ಲೂ ಪಾಕಿಸ್ತಾನ ನೀಡಿದಂತಹ ಹೇಳಿಕೆಯನ್ನ ಕಾಂಗ್ರೆಸ್ ನವರು ನೀಡಿದ್ರು. ಚೀನಾ ವಿಚಾರವಾಗಿಯೂ ಬೇಜಾವಾಬ್ದಾರಿತನದ ಹೇಳಿಕೆ ನೀಡುತ್ತಾರೆ. ಕೋವಿಡ್ ಲಸಿಕೆ ಹಾಗೂ ಹೃದಯಾಘಾತದ ಬಗ್ಗೆ ವಿಶೇಷ ಕಮೀಟಿ ವರದಿ ನೀಡಿದೆ. ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂಬ ವರದಿ ನೀಡಿದೆ. ಸಿದ್ಧರಾಮಯ್ಯ ಅವರು ಈ ಬಗ್ಗೆ ಕ್ಷಮೆ ಕೇಳಬೇಕು. ಸಿದ್ಧರಾಮಯ್ಯ ಅವರೂ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ವಿದೇಶದ ವ್ಯಾಕ್ಸಿನ್‌ ತೆಗೆದುಕೊಂಡಿದ್ದಾರಾ..? ಮೋದಿಯವರು ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎಂದು ಜೋಶಿ ಹೇಳಿದ್ದಾರೆ.

ರಾಜ್ಯ ಸರ್ಕಾರ ರಚನೆ ಮಾಡಿರುವ ಕಮೀಟಿಯೇ ಈಗಾಗಲೇ ವರದಿ ನೀಡಿದೆ. ನಿಮ್ಮ ಸರ್ಕಾರ ರಚನೆ ಮಾಡಿದ ಸಮೀತಿಯೇ ಅಧ್ಯಯನ‌ ಮಾಡಿದೆ. ಹೀಗಾಗಿ ಸಿದ್ಧರಾಮಯ್ಯ ಅವರು ಕ್ಷಮೆ ಕೇಳ್ತಾರಾ..? ಯಾವುದೇ ಆಧಾರವಿಲ್ಲದೇ ಈ ರೀತಿ ಮಾತನಾಡುವುದು ಸಮಂಜಸವಲ್ಲ. ಈಗಾಗಲೇ ಸಿದ್ಧರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಇದರಿಂದ‌ ವೈಜ್ಞಾನಿಕ ಸಮೀತಿಗೇ ಅವಮಾನ‌ ಮಾಡಿದಂತಾಗಿದೆ. ಸಿದ್ಧರಾಮಯ್ಯ ಅವರು ವೈಜ್ಞಾನಿಕ ಕಮೀಟಿಯ ಕ್ಷಮೆ ಕೇಳಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಇಲ್ಲಿಯೇ ಸಂಬಾಳಿಸಲು ಸಾಧ್ಯವಾಗುತ್ತಿಲ್ಲ, ಕೇಂದ್ರಕ್ಕೆ ಹೋಗಿ‌ ಏನ್ ಮಾಡ್ತಾರೆ..? ಮುಖ್ಯಮಂತ್ರಿ ಸ್ಥಾನ ತೆಜಿಸಿ, ದೆಹಲಿಗೆ ಬನ್ನಿ ಎಂಬ ಸಂದೇಶ ರವಾನಿಸಿದಂತಿದೆ ಅವರಿಗೆ ಒಳ್ಳೆಯದಾಗಲಿ. ರಾಷ್ಟ್ರೀಯ ಹಿಂದುಳಿದ ವರ್ಗಕ್ಕೆ ಈ ಸಂದರ್ಭದಲ್ಲಿ ನೇಮಿಸುವ ಉದ್ದೇಶವಾದ್ರು ಏನಿತ್ತು? ಡಿಕೆಶಿಯಾವರು ಇಂಟರ್ನಲ್ ಆಗಿ ಸಾಕಷ್ಟು ಜನರಿಗೆ ಹೇಳುತ್ತಿದ್ದಾರೆ. ನಾನೇ ಮುಂದಿನ ಮುಖ್ಯಮಂತ್ರಿ ಅಂತ ಹೇಳುತ್ತಿದ್ದಾರೆ. ಇತ್ತಿಚೆಗೆ ಡಿಕೆಶಿಗೆ ವೈರಾಗ್ಯ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

ರಸ್ತೆ ಬೇಕು, ಅಭಿವೃದ್ಧಿ ಬೇಕು ಅನ್ನೋದಾದ್ರೆ ಗ್ಯಾರಂಟಿ ಬಿಡಿ ಎಂಬ ರಾಯರೆಡ್ಡಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ರಾಯರೆಡ್ಡಿ ಮಾತ್ರವಲ್ಲ ಕಾಂಗ್ರೆಸ್ ನ ಬಹುತೇಕ ಶಾಸಕರು ಅದನ್ನೇ ಹೇಳುತ್ತಿದ್ದಾರೆ. ನಿನ್ನೆ ಶಿಗ್ಗಾಂವನಲ್ಲೂ ನನ್ ಸಮ್ಮುಖದಲ್ಲೇ ಕಾಂಗ್ರೆಸ್ ಶಾಸಕರು ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

- Advertisement -

Latest Posts

Don't Miss