Recipe: ಬೇಕಾಗುವ ಸಾಮಗ್ರಿ: 1 ಬೌಲ್ ಜೋಳದ ಹುಡಿ, 1 ಬೌಲ್ ಕ್ಯಾರೆಟ್ ತುರಿ-ಬೀಟ್‌ರೂಟ್ ತುರಿ-ಈರುಳ್ಳಿ-ತುರಿದ ಪನೀರ್, ಕೊತ್ತೊಂಬರಿ ಸೊಪ್ಪು, ಅರ್ಧ ಸ್ಪೂನ್ ಜೀರಿಗೆ, 1 ಸ್ಪೂನ್ ಎಳ್ಳು, ಸ್ವಲ್ಪ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, 1 ಸ್ಪೂನ್ ಧನಿಯಾ ಪುಡಿ, ಕಾಲು ಸ್ಪೂನ್ ಆಮ್ಚುರ್ ಪುಡಿ, ಸ್ವಲ್ಪ ಹಿಂಗು, 2 ಸ್ಪೂನ್ ಕಡಲೆ ಹುಡಿ, ಉಪ್ಪು, ಎಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ನಲ್ಲಿ ಜೋಳದ ಹುಡಿ, ಕ್ಯಾರೆಟ್ ತುರಿ-ಬೀಟ್‌ರೂಟ್ ತುರಿ-ಈರುಳ್ಳಿ-ತುರಿದ ಪನೀರ್, ಕೊತ್ತೊಂಬರಿ ಸೊಪ್ಪು, ಜೀರಿಗೆ, ಎಳ್ಳು, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಆಮ್ಚುರ್ ಪುಡಿ, ಹಿಂಗು, ಕಡಲೆ ಹುಡಿ, ಉಪ್ಪು ಮತ್ತು ನೀರು ಹಾಕಿ ಮಿಕ್ಸ್ ಮಾಡಿ, ಗಟ್ಟಿಯಾಗಿ ಹಿಟ್ಟು ಕಲಿಸಿ.
ಈಗ ಬಟರ್ ಪೇಪರ್‌ಗೆ ಎಣ್ಣೆ ಸವರಿ, ಈ ಹಿಟ್ಟಿನಿಂದ ರೊಟ್ಟಿ ತಟ್ಟಿ. ನಂತರ ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ ರೊಟ್ಟಿ ಬೇಯಿಸಿದರೆ ಬೀಟ್‌ರೂಟ್ ಜೋಳದ ರೊಟ್ಟಿ ರೆಡಿ. ಕಾಯಿ ಚಟ್ನಿ ಜತೆ ಇದನ್ನು ಸವಿಯಬಹುದು.

