Recipe: ಬೇಕಾಗುವ ಸಾಮಗ್ರಿ: 1 ಬೌಲ್ ಬ್ರೋಕೋಲಿ, 10ರಿಂದ 11 ಗೋಡಂಬಿ, ಕಾಲು ಕಪ್ ಕಲ್ಲಂಗಡಿ ಬೀಜ, 2 ಹಸಿಮೆಣಸು, 50 ಗ್ರಾಮ್ ಪನೀರ್, 1 ಸ್ಪೂನ್ ಶುಂಠಿ, ಬೆಳ್ಳುಳ್ಳಿ, ಫ್ರೆಶ್ ಕ್ರೀಮ್, 2 ಸ್ಪೂನ್ ಕಾರ್ನ್ ಫ್ಲೋರ್, 1 ಸ್ಪೂನ್ ಸಕ್ಕರೆ, ಪೆಪ್ಪರ್ ಪುಡಿ, kಸೂರಿ ಮೇಥಿ ಪುಡಿ, ಕಪ್ಪುಪ್ಪು, ಚಾಟ್ ಮಸಾಲಾ, ಬೆಣ್ಣೆ, ಉಪ್ಪು.
ಮಾಡುವ ವಿಧಾನ: 1 ಬೌಲ್‌ನಲ್ಲಿ ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಬ್ರೋಕೋಲಿ ಹಾಕಿ 80 ಪರ್ಸೆಂಟ್ ಬೇಯಿಸಬೇಕು. ಈ ಮಿಶ್ರಣ ಬೆಂದ ಬಳಿಕ, ಇದನ್ನು ಐಸ್ ಹಾಕಿರುವ ನೀರಿಗೆ ಹಾಕಿ ಮತ್ತೆ ವಾಶ್ ಮಾಡಬೇಕು. ಆದರೆ ಬ್ರೋಕೋಲಿ ಡ್ಯಾಮೇಜ್ ಆಗಬಾರದು.
ಈ ನೀರಿನಿಂದಲೂ ಬ್ರೋಕೋಲಿ ಆಚೆ ತೆಗೆಯಿರಿ. ಈಗ ಮತ್ತೆ ಸಣ್ಣ ಪಾತ್ರೆಯಲ್ಲಿ ನೀರಿಡಿ. ಅದು ಕುದಿ ಬಂದ ಬಳಿಕ, 10ರಿಂದ 11 ಗೋಡಂಬಿ, ಕಲ್ಲಂಗಡಿ ಬೀಜ ಹಾಕಿ 4 ನಿಮಿಷ ಬೇಯಿಸಿ.
ಈಗ ಮಿಕ್ಸಿ ಜಾರ್‌ಗೆ ಈ ಬೇಯಿಸಿದ ಬೀಜಗಳು, 2 ಹಸಿಮೆಣಸು, 50 ಗ್ರಾಮ್ ಪನೀರ್, ಶುಂಠಿ, ಬೆಳ್ಳುಳ್ಳಿ, ಫ್ರೆಶ್ ಕ್ರೀಮ್ ಹಾಕಿ ಇದರ ಪೇಸ್ಟ್ ತಯಾರಿಸಿ.
ಈಗ 1 ಮಿಕ್ಸಿಂಗ್ ಬೌಲ್‌ಗೆ ಥಿಕ್ ಕರ್ಡ್, ಈಗಾಗಲೇ ತಯಾರಿಸಿದ ಪೇಸ್ಟ್, 2 ಸ್ಪೂನ್ ಕಾರ್ನ್ ಫ್ಲೋರ್, ಉಪ್ಪು, ಸಕ್ಕರೆ, ಪೆಪ್ಪರ್ ಪುಡಿ, kಸೂರಿ ಮೇಥಿ ಪುಡಿ, ಕಪ್ಪುಪ್ಪು, ಚಾಟ್ ಮಸಾಲಾ, ಬೆಣ್ಣೆ. ಇದನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಬೇಕು.
ಈಗ ಈ ಮಿಶ್ರಣದಲ್ಲಿ ಬೇಯಿಸಿದ ಬ್ರೋಕೋಲಿ ಅದ್ದಿ, ಕಡ್ಡಿಗಳನ್ನು ತೆಗೆದುಕ“ಂಡು ಅದಕ್ಕೆ ಈ ಬ್ರೋಕೋಲಿ ಹಾಕಬೇಕು. ಪನೀರ್ ಟಿಕ್ಕಾ ರೀತಿ ಇರಬೇಕು. ಈಗ ನೀವು ಬೆಂಕಿಯಲ್ಲಿ ಅಥವಾ ತವ್ವಾದ ಮೇಲೆ ಇದನ್ನು ಬೇಯಿಸಬಹುದು. ಹಾಗೆ ಬೇಯಿಸುವಾಗ ನೀವು ತುಪ್ಪ ಬಳಸಬೇಕು. ಈಗ ಬ್ರೋಕೋಲಿ ಮಲೈ ಟಿಕ್ಕಾ ರೆಡಿ. ಇದನ್ನು ನೀವು ಪುದೀನಾ ಚಟ್ನಿ ಜತೆ ಸರ್ವ್ ಮಾಡಬಹುದು.




