Thursday, November 21, 2024

Latest Posts

Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಕ್ಯಾರೆಟ್ ಹೋಳಿಗೆ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಅರ್ಧ ಕಪ್ ರವಾಾ, 5ರಿಂದ 6 ಕ್ಯಾರೆಟ್, ಚಿಟಿಕೆ ಅರಿಶಿನ ಮತ್ತು ಉಪ್ಪು, ಎಣ್ಣೆ, 2 ಸ್ಪೂನ್ ಬಾದಾಮಿ ಪುಡಿ, ಚಿಟಿಕೆ ಏಲಕ್ಕಿ ಪುಡಿ, ಮುಕ್ಕಾಲು ಕಪ್ ಸಕ್ಕರೆ,

ಮಾಡುವ ವಿಧಾನ: ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಂಡು ಅದರಲ್ಲಿ ಮೈದಾ ಮತ್ತು ಕಾಲು ಕಪ್ ರವಾ, ಕೊಂಚ ಅರಿಶಿನ ಮತ್ತು ಕೊಂಚ ಉಪ್ಪು, ನೀರು ಹಾಾಕಿ ಚೆನ್ನಾಗಿ ನಾದಿ, ಕಣಕ ತಯಾರಿಸಿಕೊಳ್ಳಿ. ಬಳಿಕ ಅದಕ್ಕೆ ಎಣ್ಣೆ ಸವರಿ, ಮೆತ್ತಗಿನ ಕಾಟನ್ ಬಟ್ಟೆ ಮುಚ್ಚಿಡಿ.

ಈ ಹೂರಣಕ್ಕಾಗಿ, 5 ರಿಂದ 6 ಕ್ಯಾರೆಟ್ ತುರಿಯಿರಿ. ಈಗ ಒಂದು ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಕಾಲು ಕಪ್ ರವಾ ಹುರಿಯಿರಿ. ರವಾ ಘಮ ಬರುವವರೆಗೂ ಹುರಿದು ಒಂದು ಪ್ಲೇಟ್‌ನಲ್ಲಿ ತೆಗೆದಿಡಿ. ಈಗ ಅದೇ ಪ್ಯಾನ್‌ಗೆ 2 ಸ್ಪೂನ್ ತುಪ್ಪ, ತುರಿದ ಕ್ಯಾರೆಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.

ಬಳಿಕ ಈ ಮಿಶ್ರಣಕ್ಕೆ ಮುಕ್ಕಾಲು ಕಪ್ ಸಕ್ಕರೆ ಸೇರಿಸಿ, ಮಿಕ್ಸ್ ಮಾಡಿ. ಬಳಿಕ 2 ಸ್ಪೂನ್ ಬಾದಾಮ್ ಪುಡಿ ಮತ್ತು ಚಿಟಿಕೆ ಏಲಕ್ಕಿ ಪುಡಿ, ಹುರಿದಿಟ್ಟುಕೊಂಡ ರವಾ ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ. ಈಗ ಹೂರಣ ರೆಡಿ. ಹೂರಣವನ್ನು ಉಂಡೆಯಾಗಿ ಮಾಡಿ, ಕಣಕವನ್ನು ಅದರಲ್ಲಿ ತುಂಬಿಸಿ, ಲಟ್ಟಿಸಿ. ಈ ಪ್ಯಾನ್ ಬಿಸಿ ಮಾಡಿ, ಹೋಳಿಗೆ ತಯಾರಿಸಿ, ತಪ್ಪದ ಜೊತೆ ಸರ್ವ್ ಮಾಡಿ.

- Advertisement -

Latest Posts

Don't Miss