Friday, November 21, 2025

Latest Posts

Recipe: ಹೀರೇಕಾಯಿ ಕಡಲೆಬೇಳೆ ಪಲ್ಯ ರೆಸಿಪಿ

- Advertisement -

Recipe: 1 ಹೀರೇಕಾಯಿ, ಕಾಲು ಕಪ್ ಕಡಲೆಬೇಳೆ, 2 ಸ್ಪೂನ್ ಎಣ್ಣೆ, ಸ್ವಲ್ಪ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಅರ್ಧ ಸ್ಪೂನ್ ಜೀರಿಗೆ, ಕರಿಬೇವು, ಹಿಂಗು, 1 ಟೋಮೆಟೋ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಕಿಚನ್ ಕಿಂಗ್ ಮಸಾಲೆ, 4 ಸ್ಪೂನ್ ಹುರಿದ ಶೇಂಗಾ ಹುಡಿ, ಕೊತ್ತೊಂಬರಿ ಸೊಪ್ಪು, ಉಪ್ಪು.

ಮಾಡುವ ವಿಧಾನ: ಹೀರೇಕಾಯಿಯನ್ನು ಸಣ್ಣದಾಗಿ ಹೆಚ್ಚಿ, ಪ್ಯಾನ್ ಬಿಸಿ ಮಾಡಿ. ಅದರಲ್ಲಿ ಎಣ್ಣೆ, ಜೀರಿಗೆ, ಕರಿಬೇವು, ಹಿಂಗು ಹಾಕಿ ಹುರಿಯಿರಿ. ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಹಾಕಿ ಹುರಿದು ಟೋಮೆಟೋ ಸೇರಿಸಿ. ನಂತರ ಧನಿಯಾ, ಖಾರದ ಪುಡಿ, ಅರಿಶಿನ, ಕಿಚನ್ ಕಿಂಗ್ ಮಸಾಲಾ ಸೇರಿಸಿ, ಹುರಿಯಿರಿ.

ಬಳಿಕ ನೆನೆಸಿದ ಕಡ್ಲೆಬೇಳೆ, ಹೀರೇಕಾಯಿ ಸೇರಿಸಿ, ಉಪ್ಪು, ನೀರು ಹಾಕಿ ಬೇಯಿಸಿ.  ಬಳಿಕ ಗ್ಯಾಸ್ ಆಫ್ ಮಾಡಿ. ಶೇಂಗಾಕಾಳು, ಕೊತ್ತೊಂಬರಿ ಸೊಪ್ಪು ಸೇರಿಸಿ, ಮಿಕ್ಸ್ ಮಾಡಿ, 5 ನಿಮಿಷ ಮುಚ್ಚಳ ಮುಚ್ಚಿ. ಬಳಿಕ ಘಮ ಘಮಿಸುವ ಪಲ್ಯ ರೆಡಿ.

- Advertisement -

Latest Posts

Don't Miss