Wednesday, December 11, 2024

Latest Posts

Recipe: ಪ್ರಸಾದವಾಗಿ ತಯಾರಿಸಬಹುದು ಚಿಕ್ಕು ಶೀರಾ.. ಇಲ್ಲಿದೆ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ತುಪ್ಪ, ಬೇಕಾದಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ, 1 ಚಿಕ್ಕು, ಅರ್ಧ ಕಪ್ ರವೆ, 1ವರೆ ಕಪ್ ಕುದಿಸಿದ ನೀರು, ಅರ್ಧ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ ತುಪ್ಪ ಹಾಕಿ, ಡ್ರೈಫ್ರೂಟ್ಸ್‌ ಹುರಿದುಕೊಳ್ಳಿ. ಜೊತೆಗೆ ಚಿಕ್ಕುವನ್ನೂ ಹುರಿದುಕೊಳ್ಳಿ. ಅದನ್ನು ತೆಗೆದು ಪಕ್ಕಕ್ಕಿರಿಸಿ. ಬಳಿಕ ಅದೇ ಪ್ಯಾನ್‌ಗೆ ಮತ್ತೊಂದಿಷ್ಟು ತುಪ್ಪ ಹಾಕಿ, ರವೆ ಹುರಿಯಿರಿ. ರವೆ ಘಮ ಬಂದ ಬಳಿಕ, ಕುದಿಸಿದ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸಕ್ಕರೆ ಸೇರಿಸಿ, ಕೈಯಾಡಿಸಿ.

ಬಳಿಕ ಮತ್ತಷ್ಟು ತುಪ್ಪ, ಹುರಿದ ಡ್ರೈಫ್ರೂಟ್ಸ್, ಚಿಕ್ಕು, ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿದ್ರೆ, ಚಿಕ್ಕು ಶೀರಾ ರೆಡಿ. ಇದನ್ನು ನೀವು ಪೂಜೆಗೆ ಮಾಡಬಹುದು.

- Advertisement -

Latest Posts

Don't Miss