Thursday, June 19, 2025

Latest Posts

Recipe: ಕರಾವಳಿ ಶೈಲಿಯ ಅನಾನಸ್ ಮೆಣಸುಕಾಯಿ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 1 ಕಪ್ ಪೈನಾಪಲ್ ಅಥವಾ ಅನಾನಸ್, 2 ಸ್ಪೂನ್ ಎಣ್ಣೆ, 2 ಸ್ಪೂನ್ ಎಳ್ಳು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕ“ತ್ತ“ಂಬರಿ ಕಾಳು, 1 ಸ್ಪೂನ್ ಉದ್ದಿನ ಬೇಳೆ, ಕಾಲು ಸ್ಪೂನ್ ಮೆಂತ್ಯೆ, 5ರಿಂದ 6 ಒಣಮೆಣಸು, 1 ಕಪ್ ತೆಂಗಿನತುರಿ, ಅರಿಶಿನ, ಬೆಲ್ಲ, ಉಪ್ಪು. ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಒಣಮೆಣಸು.

ಮಾಡುವ ವಿಧಾನ: 1 ಪಾತ್ರೆಯಲ್ಲಿ ಅನಾನಸ್, ನೀರು, ಉಪ್ಪು, ಬೆಲ್ಲ, ಅರಿಶಿನ ಹಾಕಿ ಕುದಿಸಲು ಇಡಿ. 1 ಪ್ಯಾನ್‌ನಲ್ಲಿ ಎಣ್ಣೆ, ಎಳ್ಳು, ಜೀರಿಗೆ, ಉದ್ದಿನ ಬೇಳೆ, ಕ“ತ್ತ“ಂಬರಿ ಕಾಳು, ಮೆಂತ್ಯೆ, ಒಣಮೆಣಸು ಹಾಕಿ ಚೆನ್ನಾಗಿ ಹುರಿಯಿರಿ. ಘಮ ಬಂದ ಬಳಿಕ, ಅದನ್ನು ತಣ್ಣಗಾಗಿಸಿ, ಮಿಕ್ಸಿ ಜಾರ್‌ಗೆ ತೆಂಗಿನ ತುರಿ, ನೀರು ಮತ್ತು ಹುರಿದ ಮಿಶ್ರಣವನ್ನು ಸೇರಿಸಿ, ಮಸಾಲೆ ರುಬ್ಬಿಕ~`ಳ್ಳಿ.

ಬಳಿಕ ಅರ್ಧ ಬೆಂದ ಅನಾನಸ್‌ಗೆ ರುಬ್ಬಿದ ಮಿಶ್ರಣ ಸೇರಿಸಿ, ಚೆನ್ನಾಗಿ ಕುದಿಸಿ. ನಂತರ ಪ್ಯಾನ್‌ಗೆ ಎಣ್ಣೆ, ಕರಿಬೇವು, ಸಾಸಿವೆ, ಮೆಣಸು ಹಾಕಿ ಒಗ್ಗರಣೆ ನೀಡಿದರೆ ಕರಾವಳಿ ಶೈಲಿಯ ಅನಾನಸ್ ಮೆಣಸ್‌ಕಾಯಿ ರೆಡಿ. ಇದನ್ನು ಅನ್ನ, ಚಪಾತಿ, ದೋಸೆ, ಇಡ್ಲಿಯ“ಂದಿಗೆ ಸವಿಯಬಹುದು.

- Advertisement -

Latest Posts

Don't Miss