Recipe: ಬೇಕಾಗುವ ಸಾಮಗ್ರಿ: ಬ್ರೋಕಲಿ, ಈರುಳ್ಳಿ, ಬೆಳ್ಳುಳ್ಳಿ, 1 ಸ್ಪೂನ್ ಗೋಧಿ ಹುಡಿ, 1 ಕಪ್ ಕಾದು ತಣಿಸಿದ, ಬೆಚ್ಚಗಿನ ಹಾಲು, 1 ಸ್ಪೂನ್ ಪೆಪ್ಪರ್ ಪುಡಿ, ಆರೆಗ್ಯಾನೋ, ಉಪ್ಪು.
ಮಾಡುವ ವಿಧಾನ: ಕುದಿಯುವ ನೀರಿಗೆ ಬ್ರೋಕಲಿ ಮತ್ತು ಉಪ್ಪು ಹಾಕಿ, ಸ್ವಲ್ಪ ಕುದಿಸಿ. ಗ್ಯಾಸ್ ಆಫ್ ಮಾಡಿ. ಬ್ರೋಕಲಿ ಹೆಚ್ಚು ಬೇಯಬಾರದು. ಬಳಿಕ ನೀರು ಮತ್ತು ಬ್ರೋಕಲಿ ಬೇರೆ ಬೇರೆ ಮಾಡಿ. ಈಗ 1 ಪ್ಯಾನ್‌ಗೆ ಬೆಣ್ಣೆ, ಈರುಳ್ಳಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಗೋದಿ ಹುಡಿ ಹಾಕಿ ಹುರಿಯಿರಿ. ನಂತರ ಬ್ರೋಕಲಿ ಹಾಕಿ ಮಿಕ್ಸ್ ಮಾಡಿ.
ಅದಾಗಲೇ ಬ್ರೋಕಲಿ ಬೇಯಿಸಿದ ನೀರನ್ನು ಇದಕ್ಕೆ ಹಾಕಿ ಮುಚ್ಚಳ ಮುಚ್ಚಿ, ಮಂದ ಉರಿಯಲ್ಲಿ 5 ನಿಮಿಷ ಬೇಯಿಸಿ. ಬಳಿಕ ಈ ಮಿಶ್ರಣವನ್ನು ಮ್ಯಾಶ್ ಮಾಡಿ, ಇದಕ್ಕೆ 1 ಕಪ್ ಕಾದು ತಣಿಸಿದ, ಸ್ವಲ್ಪ ಬೆಚ್ಚಗಿರುವ ಹಾಲನ್ನು ಹಾಕಿ. ಈಗ ಸೂಪನ್ನು ಮಂದ ಉರಿಯಲ್ಲಿರಿಸಿ, ಅವಶ್ಯಕತೆ ಇದ್ದಲ್ಲಿ, ಉಪ್ಪು, ಪೆಪ್ಪರ್ ಪುಡಿ, ಆರೆಗ್ಯಾನೋ, ಹಾಕಿ ಮಿಕ್ಸ್ ಮಾಡಿ, ಗ್ಯಾಸ್ ಆಫ್ ಮಾಡಿ, ಸೂಪ್ ಸರ್ವ್ ಮಾಡಿ. ಇದರ ಜತೆ ಗಾರ್ಲಿಕ್ ಬ್ರೆಡ್ ಸೇವಿಸಲಾಗುತ್ತದೆ.