Wednesday, October 15, 2025

Latest Posts

Recipe: ಡ್ರೈ ಫ್ರೂಟ್ಸ್ ಚಾಕೋಲೇಟ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋಡಂಬಿ, ಬಾದಾಮ್, ಪಿಸ್ತಾ, ಒಂದು ಕಪ್ ವೈಟ್ ಚಾಕೋಲೇಟ್, ಹೆಚ್ಚು ಸಕ್ಕರೆ ಬೇಕಾಗಿದ್ದಲ್ಲಿ, ಸಕ್ಕರೆ ಬಳಸಬಹುದು.

ಮಾಡುವ ವಿಧಾನ: ಮೊದಲು ಕಾಜು, ಬಾದಾಮ್, ಪಿಸ್ತಾವನ್ನು ಚೆನ್ನಾಗಿ ಹುರಿದುಕೊಳ್ಳಿ. ಬಳಿಕ ಈ ಡ್ರೈಫ್ರೂಟ್‌ಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಬಳಿಕ ಒಂದು ಕಪ್ ವೈಟ್ ಚಾಕೋಲೇಟನ್ನು ಡಬಲ್ ಬಾಯ್ಲರ್ ಮೂಲಕ ಕರಗಿಸಿಕೊಳ್ಳಿ. ಅಂದ್ರೆ ಒಂದು ಪಾತ್ರೆಯಲ್ಲಿ ನೀರು ಇಟ್ಟು ಅದರ ಮೇಲೆ ಮತ್ತೊಂದು ಪಾತ್ರೆ ಇರಿಸಿ, ಆ ಪಾತ್ರೆಯಲ್ಲಿ ವೈಟ್ ಚಾಕೋಲೇಟ್ ಹಾಕಿ, ಮೆಲ್ಟ್ ಮಾಡಬೇಕು.

ಇಲ್ಲಿ ನೀವು ವೈಟ್ ಚಾಕೋಲೇಟ್ ಬದಲು, ಡಾರ್ಕ್ ಚಾಕೋಲೇಟ್‌ ಬಳಸಬಹುದು. ಆದರೆ ಡಾರ್ಕ್ ಚಾಕೋಲೇಟ್ ಬಳಸುವಾಗ, ಸಿಹಿಯಾಗಲು ಸಕ್ಕರೆ ಬಳಸಬೇಕಾಗುತ್ತದೆ.

ವೈಟ್ ಚಾಕೋಲೇಟ್ ಮೆಲ್ಟ್ ಆದ ಬಳಿಕ, ಚಾಕೋಲೇಟ್ ಮೌಲ್ಡ್ ನಲ್ಲಿ ವೈಟ್ ಚಾಕೋಟೇಲ್ ಹಾಕಿ, ಅದರ ಮೇಲೆ ಹುರಿದ ಡ್ರೈಫ್ರೂಟ್ಸ್ ಹಾಕಿ, ಸೆಟ್ ಮಾಡಬೇಕು. ಬಳಿಕ ಇದನ್ನು ಫ್ರಿಜ್‌ನಲ್ಲಿ ಇರಿಸಬೇಕು. ಕೆಲ ಗಂಟೆಯ ಬಳಿಕ ಚಾಕೋಲೇಟ್ ರೆಡಿಯಾಗುತ್ತದೆ. ನಿಮಗೆ ಇನ್ನೂ ಸಿಹಿಯಾಗಬೇಕು ಎಂದಲ್ಲಿ, ನೀವು ಸಕ್ಕರೆ ಕರಗಿಸಿ. ಅದರಲ್ಲಿ ಹುರಿದುಕೊಂಡ ಡ್ರೈಫ್ರೂಟ್ಸ್ ಸೇರಿಸಿ, ಬಳಸಬಹುದು.

- Advertisement -

Latest Posts

Don't Miss