Tuesday, December 10, 2024

Latest Posts

ಬೆಳಿಗ್ಗೆ ಬೇಗ ಏಳುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

- Advertisement -

Health tips: ನಮ್ಮ ಹಿರಿಯರೆಲ್ಲ ಬೆಳಿಗ್ಗೆ 5 ಗಂಟೆಗೆ ಅಂದ್ರೆ, ಎದ್ದು, ಮನೆಗೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಇಂದಿನ ಯುವಪೀಳಿಗೆಗೆ ನಿದ್ರೆ ಎಂದರೆ, ಬಹುಪ್ರೀತಿ. ಹಾಗಾಗಿ ಬೇಗ ಏಳಲು ಮನಸ್ಸಾಗೋದೇ ಇಲ್ಲ. ಆದರೆ ಬೆಳಿಗ್ಗೆ ಬೇಗ ಏಳುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಉತ್ತಮವಂತೆ. ಹಾಗಾದ್ರೆ ಬೆಳಿಗ್ಗೆ ಬೇಗ ಎದ್ದರೆ ಏನೆಲ್ಲ ಆರೋಗ್ಯ ಲಾಭವಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಬೆಳಿಗ್ಗೆ 4 ಗಂಟೆಯಿಂದ 5.30ರವರೆಗೆ ಬ್ರಾಹ್ಮಿ ಮುಹೂರ್ತವಿರುತ್ತದೆ. ಇಷ್ಟರೊಳಗೆ ಯಾರು ಎದ್ದು ತಮ್ಮ ದೈನಂದಿನ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೋ, ಅವರ ಜೀವನದಲ್ಲಿ ಅಭಿವೃದ್ಧಿ ಇರುತ್ತದೆ. ಮತ್ತು ಅವರು ಆರೋಗ್ಯವಂತರಾಗಿರುತ್ತಾರೆ. ಮಾನಸಿಕವಾಗಿ ಸಧೃಡರಾಗಿರುತ್ತಾರೆ ಎಂದು ಹೇಳಲಾಗುತ್ತದೆ.

ಇನ್ನು ನೀವು ಮುಂಜಾನೆ 5.30ರ ಮೇಲೆ ಮಾಡುವ ಕೆಲಸಗಳಿಗಿಂತ, ಬ್ರಾಹ್ಮಿ ಮೂಹುರ್ತದಲ್ಲಿ ಯಾವುದಾದರೂ ಕೆಲಸ ಮಾಡಿದರೆ, ಆ ಕೆಲಸದಲ್ಲಿ ನೀವು ಯಶಸ್ವಿಯಾಗುವಿರಿ. ಉದಾಹರಣೆಗೆ, ನಿಮಗೆ ಯೋಗ ಕಲಿಯಬೇಕು, ಬರವಣಿಗೆ, ಸಂಗೀತ, ಪೇಂಟಿಂಗ್ ಹೀಗೆ ಹಲವು ಕಲೆಗಳನ್ನು ಕರಗತ ಮಾಡಿಕೊಂಡು, ಅದರಲ್ಲಿ ಯಶಸ್ಸು ಸಾಧಿಸಬೇಕು ಎಂದಲ್ಲಿ, ನೀವು ಈ ಸಮಯದಲ್ಲಿ ಎದ್ದು, ಪ್ರಾಕ್ಟೀಸ್ ಮಾಡಬೇಕು.

ಯಾಕೆ ಹೀಗೆ ಎಂದರೆ, ಬ್ರಾಹ್ಮಿ ಮೂಹುರ್ತದಲ್ಲಿ ನಮ್ಮ ದೇಹದಲ್ಲಿರುವ ಚಕ್ರಗಳು ಆ್ಯಕ್ಟೀವ್ ಆಗಿರುತ್ತದೆ. ಮೆದುಳಿನ ಕ್ರಿಯೆ ಅತ್ಯುತ್ತಮವಾಗಿರುತ್ತದೆ. ಸಕಾರಾತ್ಮ ಯೋಚನೆ ಬರುವ ಹೊತ್ತು ಅದಾಗಿರುತ್ತದೆ. ಹಾಗಾಗಿ ಬ್ರಾಹ್ಮಿ ಮೂಹುರ್ತದಲ್ಲಿ ನಾವು ಏಕಾಗೃತೆಯಿಂದ ನಮ್ಮ ಕೆಲಸದಲ್ಲಿ ತೊಡಗಬಹುದು.

ಅದರಲ್ಲೂ ನೀವು ಈ ಸಮಯದಲ್ಲಿ ಎದ್ದು ಅರ್ಧ ಗಂಟೆ ಧ್ಯಾನ, ಯೋಗ, ವ್ಯಾಯಾಮ ಮಾಡಿದರೆ, ನಿಮ್ಮ ಆರೋಗ್ಯದ ಜೊತೆ, ವಿದ್ಯಾಭ್ಯಾಸ, ಕೆಲಸಗಳಲ್ಲೂ ನೀವು ಯಶಸ್ವಿಯಾಗುತ್ತೀರಿ. ಜೊತೆಗೆ ದೇವರ ಧ್ಯಾನ ಮಾಡುವುದು ಉತ್ತಮ.

- Advertisement -

Latest Posts

Don't Miss