Recipe: ಬೇಕಾಗುವ ಸಾಮಗ್ರಿ: 1 ಕಪ್ ಮೈದಾ, , 2 ಸ್ಪೂನ್ ಕಡಲೆ ಹುಡಿ, ಉಪ್ಪು, ಅರಿಶಿನ, ಇಂಗು, 2 ಸ್ಪೂನ್ ಬಿಸಿ ಎಣ್ಣೆ ಇವು ಹಿಟ್ಟು ತಯಾರಿಸಲು ಬೇಕಾಗುವ ಸಾಮಗ್ರಿ.
ಹೂರಣಕ್ಕಾಗಿ, 1 ಕಪ್ ಒಣ ಕೊಬ್ಬರಿ ತುರಿ, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಎಳ್ಳು, ಗಸಗಸೆ, ಅರಿಶಿನ, ಇಂಗು, ಖಾರದ ಪುಡಿ, ಸಕ್ಕರೆ, ಆಮ್ಚುರ್ ಪುಡಿ, ಉಪ್ಪು. ಬೆಲ್ಲ ಮತ್ತು ಹುಣಸೆ ಸೇರಿಸಿ ಮಾಡಿದ ಚಟ್ನಿ, ಕರಿಯಲು ಎಣ್ಣೆ.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಮೈದಾ ಹಾಕಿ, 2 ಸ್ಪೂನ್ ಕಡಲೆ ಹುಡಿ, ಉಪ್ಪು, ಅರಿಶಿನ, ಇಂಗು ಹಾಕಿ ಮಿಕ್ಸ್ ಮಾಡಿ. ಬಳಿಕ 2 ಸ್ಪೂನ್ ಬಿಸಿ ಮಾಡಿದ ಎಣ್ಣೆ, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ. ಬದಿಗಿರಿಸಿ.
ನಂತರ ಫಿಲ್ಲಿಂಗ್ಸ್ ತಯಾರಿಸಲು, ಮಿಕ್ಸಿಜಾರ್‌ಗೆ ಒಣ ಕೊಬ್ಬರಿ ತುರಿ, ಜೀರಿಗೆ, ಸೋಂಪು, ಕೊತ್ತೊಂಬರಿ ಕಾಳು, ಎಳ್ಳು, ಗಸಗಸೆ, ಅರಿಶಿನ, ಇಂಗು, ಖಾರದ ಪುಡಿ, ಸಕ್ಕರೆ, ಆಮ್ಚುರ್ ಪುಡಿ, ಉಪ್ಪು ಸೇರಿಸಿ, ತರಿ ತರಿಯಾಗಿ ಪುಡಿ ಮಾಡಿ. ಈಗ ಫಿಲ್ಲಿಂಗ್ಸ್ ರೆಡಿ.
ಈಗ ರೆಡಿಯಾಗಿರುವ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ, ಅದರ ಮೇಲೆ ಹುಣಸೆ ಚಟ್ನಿ ಸವರಿ, ಅದರ ಮೇಲೆ ಫಿಲ್ಲಿಂಗ್ಸ್ ಸವರಿ. ಪೋಲ್ಡ್ ಮಾಡಿ. ಬಳಿಕ ಬಿಲ್ಲೆಯಾಕಾರದಲ್ಲಿ ಕತ್ತರಿಸಿ. ಕಾದ ಎಣ್ಣೆಗೆ ಹಾಕಿ, ಮಂದ ಉರಿಯಲ್ಲಿ ಕಾಯಿಸಿದರೆ, ಭಾಕರ್‌ವಾಡಿ ರೆಡಿ.