Thursday, November 13, 2025

Latest Posts

Recipe: ಆರೋಗ್ಯಕರ ಮತ್ತು ರುಚಿಯಾದ ರಾಗಿ- ಸ್ವೀಟ್ ಕಾರ್ನ್ ಥಾಲಿಪಿಟ್ ರೆಸಿಪಿ

- Advertisement -

Recipe: ರಾಗಿ ತಿಂದವನಿಗೆ ರೋಗವಿಲ್ಲ ಅಂತಾ ಹೇಳ್ತಾರೆ. ಆದರೆ ಇಂದಿನ ಕಾಲದಲ್ಲೂ ಹಲವರು ರಾಗಿಯ ಮಹತ್ವ ತಿಳಿಯದೇ, ಅದು ರುಚಿ ಇಲ್ಲದ ಆಹಾರ ಅಂತಲೇ ಹೇಳ್ತಾರೆ. ಆದರೆ ರಾಗಿ ಮೆಚ್ಚದವರು ಕೂಡ ಈ ರಾಗಿ ತಿಂಡಿಯನ್ನು ಬಾಯಿ ಚಪ್ಪರಿಸಿ ತಿನ್ನುವ ಹಾಗೆ ಮಾಡಬಹುದು. ಹಾಗಾದ್ರೆ ರಾಗಿ-ಕಾರ್ನ್ ತಾಲಿಪಿಟ್ಟು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.

ಬೇಕಾಗುವ ಸಾಮಗ್ರಿ: ಸ್ವೀಟ್ ಕಾರ್ನ್, 1 ಬೌಲ್ ರಾಗಿ ಹುಡಿ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಕೊತ್ತೊಂಬರಿ, ಜೀರಿಗೆ, ಬೆಳ್ಳುಳ್ಳಿ, ಹಸಿಮೆಣಸು, ವೋಮ, ಹಳದಿ ಪುಡಿ, ಖಾರದ ಪುಡಿ, ಧನಿಯಾ ಪುಡಿ, ಸ್ವಲ್ಪ ಗರಂ ಮಸಾಲೆ ಪುಡಿ, ಎಳ್ಳು, ಅಕ್ಕಿ ಹುಡಿ, ಉಪ್ಪು, ಎಣ್ಣೆ ಅಥವಾ ತುಪ್ಪ.

ಮಾಡುವ ವಿಧಾನ: ಸ್ವೀಟ್ ಕಾರ್ನ್‌ ಅನ್ನು ತುರಿತು ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ಕೊತ್ತೊಂಬರಿ ಕಾಳು, ವೋಮ, ಹಳದಿ ಪುಡಿ, ಖಾರದ ಪುಡಿ, ಧನಿಯಾ ಪುಡಿ, ಸ್ವಲ್ಪ ಗರಂ ಮಸಾಲೆ ಪುಡಿ, ಎಳ್ಳು, ಉಪ್ಪು, 4 ಸ್ಪೂನ್ ಅಕ್ಕಿ ಹುಡಿ, ರಾಗಿ ಹುಡಿ, ನಂತರ ನೀರು ಹಾಕಿ ಚಪಾತಿ ದಹಕ್ಕೆ ಕಲಿಸಿ.

ನಂತರ ಬಟರ್ ಪೇಪರ್‌ಗೆ ಎಣ್ಣೆ ಸವರಿ ರಾಗಿ ಥಾಲಿಪಿಟ್ಟು ತಟ್ಟಿ ಎಣ್ಣೆ ಅಥವಾ ತುಪ್ಪ ಹಾಕಿ, ಕಾದ ಕಾವಲಿಯಲ್ಲಿ ಮಂದ ಉರಿಯಲ್ಲಿ ಕಾಸಿದ್ರೆ, ರಾಗಿ-ಕಾರ್ನ್ ಥಾವಿಪಿಟ್ ರೆಡಿ. ಬೇಕಾದ್ರೆ ನೀವು ಮತ್ತೂ ಎಳ್ಳು ಬಳಕೆ ಮಾಡಬಹುದು.

- Advertisement -

Latest Posts

Don't Miss