Recipe: ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, ಸ್ವಲ್ಪ ಪುದೀನಾ, ಸ್ವಲ್ಪ ಕೊತ್ತೊಂಬರಿ ಸೊಪ್ಪು, 1 ಈರುಳ್ಳಿ, 1 ಕಪ್ ಕಾರ್ನ್, ಅಕ್ಕಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಶುಂಠಿ-ಬೆಳ್ಳುಳ್ಳಿ- ಹಸಿಮೆಣಸಿನ ಪೇಸ್ಟ್, 3 ಸ್ಪೂನ್ ತುಪ್ಪ ಅಥವಾ ಎಣ್ಣೆ, ಗರಂ ಮಸಾಲೆ, ಚಾಟ್ ಮಸಾಲೆ, ಅರಿಶಿನ, ಉಪ್ಪು.
ಮಾಡುವ ವಿಧಾನ: ಪಾಲಕ್ ಕ್ಲೀನ್ ಮಾಡಿ, ಬಿಸಿ ನೀರಿಗೆ ಹಾಕಿ ಸ್ವಲ್ಪ ಕುದಿಸಿ. ಬಳಿಕ ಐಸ್ ನೀರಿಗೆ ಹಾಕಿ ತೆಗೆಯಿರಿ. ನಂತರ ಮಿಕ್ಸಿ ಜಾರ್‌ಗೆ ಹಾಕಿ, ಪುದೀನಾ, ಕೊತ್ತೊಂಬರಿ ಸೊಪ್ಪು ಹಾಕಿ ರುಬ್ಬಿ.
ಈಗ ಕುಕ್ಕರ್‌ಗೆ ತುಪ್ಪ ಅಥವಾ ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ಈರುಳ್ಳಿ ಹಾಕಿ ಬಾಡಿಸಿ. ಬಳಿಕ ಶುಂಠಿ-ಬೆಳ್ಳುಳ್ಳಿ- ಹಸಿಮೆಣಸಿನ ಪೇಸ್ಟ್ ಹಾಕಿ ಬಾಡಿಸಿ. ನಂತರ ಗರಂ ಮಸಾಲೆ, ಚಾಟ್ ಮಸಾಲೆ, ಉಪ್ಪು, ಅರಿಶಿನ ಹಾಕಿ ಮಿಕ್ಸ್ ಮಾಡಿ.
ನಂತರ ರುಬ್ಬಿದ ಪಾಲಕ್, ಅಕ್ಕಿ, ಕಾರ್ನ್ ಹಾಕಿ ಮಿಕ್ಸ್ ಮಾಡಿ, ನೀರು ಹಾಕಿ, ಮೂರು ವಿಶಲ್ ಬರಿಸಿದರೆ, ಕಾರ್ನ್-ಪಾಲಕ್ ರೈಸ್ ರೆಡಿ.




