Friday, July 18, 2025

Latest Posts

Recipe: ಮಳೆಗಾಲದ ಆರೋಗ್ಯಕರ ರೆಸಿಪಿ: ಶುಂಠಿ ರಸಮ್

- Advertisement -

Recipe: ಬೇಕಾಗುವ ಸಾಮಗ್ರಿ: ಸ್ವಲ್ಪ ತ“ಗರಿ ಬೇಳೆ, ಚಿಕ್ಕ ತುಂಡು ಶುಂಠಿ, 1 ಸ್ಪೂನ್ ಜೀರಿಗೆ, ಪೆಪ್ಪರ್, 3 ಸ್ಪೂನ್ ತುಪ್ಪ, 1 ಸ್ಪೂನ್ ಸಾಸಿವೆ, ಹಿಂಗು, 2 ಒಣಮೆಣಸು, ಕರಿಬೇವು, ಹಸಿಮೆಣಸು, ಉಪ್ಪು, ಅರಿಶಿನ, ಬೆಲ್ಲ, ನಿಂಬೆರಸ, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಬೇಳೆ ಬೇಯಿಸಲು ಇಡಿ. ಬಳಿಕ ಶುಂಠಿ, ಜೀರಿಗೆ, ಪೆಪ್ಪರ್ ಹಾಕಿ ತರಿ ತರಿಯಾಗಿ ಪುಡಿ ಮಾಡಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ, ಸಾಸಿವೆ, ಜೀರಿಗೆ, ಮೆಣಸು, ಕರಿಬೇವು, ಹಿಂಗು, ಹಾಕಿ ಹುರಿಯಬೇಕು.

ಬಳಿಕ ಪುಡಿ ಮಾಡಿದ ಶುಂಠಿ, ಪೆಪ್ಪರ್, ಜೀರಿಗೆ ಹಾಕಿ ಮತ್ತೆ ಹುರಿಯಬೇಕು. ಬಳಿಕ ಉಪ್ಪು, ಅರಿಶಿನ, ನೀರು, ಬೆಲ್ಲ ಮತ್ತು ಬೇಯಿಸಿದ ಬೇಳೆ ಹಾಕಿ ಕುದಿ ಬರಿಸಬೇಕು. ಬಳಿಕ ಗ್ಯಾಸ್ ಆಫ್ ಮಾಡಿ, ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದ್ರೆ, ರಸಂ ರೆಡಿ.

- Advertisement -

Latest Posts

Don't Miss