Recipe: ಆರೋಗ್ಯಕರ ಮೊಳಕೆ ಕಾಳಿನ ಸ್ಯಾಂಡ್‌ವಿಚ್

Recipe: ಬೇಕಾಗುವ ಸಾಮಗ್ರಿ: 1 ಕಪ್ ಮೊಳಕೆ ಬರಿಸಿದ ಹೆಸರು ಕಾಳು, ಕಾಲು ಕಪ್ ಕಡಲೆಹುಡಿ, ಕೊತ್ತೊಂಬರಿ ಸೊಪ್ಪು, ಶುಂಠಿ, 2 ಹಸಿಮೆಣಸು, 1 ಸ್ಪೂನ್ ಎಳ್ಳು, ಪುದೀನಾ ಚಟ್ನಿ, ಲೋ ಫ್ಯಾಟ್ ಸ್ಪ್ರೆಡ್, ಈರುಳ್ಳಿ, ಕ್ಯಾರೇಟ್, ಟೋಮೆಟೋ, ಉಪ್ಪು.

ಮಾಡುವ ವಿಧಾನ: ಬ್ಲೆಂಡರ್‌ನಲ್ಲಿ ಮೊಳಕೆ ಬರಿಸಿದ ಹೆಸರು ಕಾಳು, 3 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿ. ಇದನ್ನು ಮಿಕ್ಸಿಂಗ್‌ ಬೌಲ್‌ಗೆ ಹಾಕಿ, ಇದಕ್ಕೆ ಕಡಲೆಹುಡಿ, ಸೋಡಾ, ಉಪ್ಪು ಹಾಕಿ ಮಿಕ್ಸ್ ಮಾಡಿ. ಸೋಡಾ ಬೇಕಾದ್ದಲ್ಲಿ ಮಾತ್ರ ಮಿಕ್ಸ್ ಮಾಡಿ.

ಪ್ಯಾಾನ್ ಬಿಸಿ ಮಾಡಿ, ಎಣ್ಣೆ ಸವರಿ, ಅದರ ಮೇಲೆ ಎಳ್ಳು ಹರಡಿ, ದಪ್ಪಗೆ ಈ ಹಿಟ್ಟಿನಿಂದ ಚೌಕಾಕಾರದ ದೋಸೆ ಮಾಡಿ. ಈಗ ಇದು ಬ್ರೆಡ್ ಶೇಪ್‌ ದೋಸೆ ಆಯಿತು. ಹೀಗೆ 2 ದೋಸೆ ಮಾಡಿ, 1ದೋಸೆಗೆ ಪುದೀನಾ ಚಟ್ನಿ ಸವರಿ, ಲೋ ಫ್ಯಾಟ್ ಸ್ಪ್ರೆಡ್ ಹಚ್ಚಿ.

ಬಳಿಕ ಇದರ ಮೇಲೆ ನಿಮಗೆ ಬೇಕಾದ ತರಕಾರಿ ಇಡಿ. ಈರುಳ್ಳಿ, ಕ್ಯಾರೇಟ್, ಟೋಮೆಟೋ ಹೀಗೆ ನಿಮಗೆ ಬೇಕಾದ ತರಕಾರಿ ಹಾಕಿ, ಮುಚ್ಚಿದ್ರೆ ಆರೋಗ್ಯಕರ ಕಾಳಿನ ಸ್ಯಾಂಡ್‌ವಿಚ್ ರೆಡಿ. ಇದನ್ನು ನೀವು ನಿಮ್ಮ ಮಕ್ಕಳ ಬಾಕ್ಸ್‌ಗೂ ಹಾಕಿ ಕಳಿಸಬಹುದು.

About The Author