Thursday, November 27, 2025

Latest Posts

Recipe: ಇನ್‌ಸ್ಟಂಟ್ ರವಾ ದೋಸೆ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ಸಾಬಕ್ಕಿ, ಅರ್ಧ ಕಪ್ ರವಾ, 1 ಬೇಯಿಸಿ, ಸಿಪ್ಪೆ ತೆಗೆದ ಆಲೂಗಡ್ಡೆ, 3 ಹಸಿಮೆಣಸು, ಅರ್ಧ ಸ್ಪೂನ್ ಜೀರಿಗೆ, ಕೊತ್ತಂಬರಿ ಸೊಪ್ಪು, ಚಿಕ್ಕ ತುಂಡು ಶುಂಠಿ, 2 ಸ್ಪೂನ್ ಮೊಸರು, ಉಪ್ಪು, ಎಣ್ಣೆ.

ಮಾಡುವ ವಿಧಾನ: ಸಾಬಕ್ಕಿಯನ್ನು ಚೆನ್ನಾಗಿ ಹುರಿಯಬೇಕು. ಮಂದ ಉರಿಯಲ್ಲಿ ಹುರಿದರೆ ಉತ್ತಮ. ಬಳಿಕ ಹುರಿದ ಸಾಬಕ್ಕಿ, ರವಾ, ಆಲೂಗಡ್ಡೆ, ಹಸಿಮೆಣಸು, ಚಿಕ್ಕ ತುಂಡು ಶುಂಠಿ, ಮೊಸರು, ಉಪ್ಪು ಸೇರಿಸಿ, ರುಬ್ಬಿ ದೋಸೆ ಹಿಟ್ಟು ರೆಡಿ ಮಾಡಿ. 15 ನಿಮಿಷ ಹಾಗೆ ಇರಿಸಿ.

ದೋಸೆ ಮಾಡುವ ವೇಳೆ ಜೀರಿಗೆ, ಕೊತ್ತಂಬರಿ ಸೊಪ್ಪು ಸೇರಿಸಿ, ದೋಸೆ ಮಾಡಿ. ಇದರ ಜತೆಗೆ ಚಟ್ನಿ, ಆಲೂಗಡ್ಡೆ ಪಲ್ಯ ಉತ್ತಮ ಕಾಂಬಿನೇಷನ್.

- Advertisement -

Latest Posts

Don't Miss