Friday, December 6, 2024

Latest Posts

Recipe: ಮನೆಯಲ್ಲೇ ಈಸಿಯಾಗಿ ತಯಾರಿಸಬಹುದು ಕಾಶಿ ಹಲ್ವಾ

- Advertisement -

ಬೇಕಾಗುವ ಸಾಮಗ್ರಿ: ಸಣ್ಣ ತುಂಡು ಬೂದುಗುಂಬಳಕಾಯಿ, ಕೊಂಚ ಹಾಲಿನಲ್ಲಿ ನೆನೆಸಿಟ್ಟ ಕೇಸರಿ ದಳ, 1 ಕಪ್ ಸಕ್ಕರೆ, ಡ್ರೈಫ್ರೂಟ್ಸ್, ಅರ್ಧ ಕಪ್ ತುಪ್ಪ, ಏಲಕ್ಕಿ ಪುಡಿ.

ಮಾಡುವ ವಿಧಾನ: ಒಂದು ಸಣ್ಣ ತುಂಡು ಬೂದುಗುಂಬಳಕಾಯಿಯನ್ನು ತುರಿದುಕೊಳ್ಳಿ. ಅದನ್ನು ಹಿಂಡಿ ಅದರ ನೀರು ತೆಗೆಯಿರಿ. ಅರ್ಧ ನೀರು ತೆಗೆದು, ಸ್ವಲ್ಪ ನೀರು ಇರುವಂತೆ ಹಿಡಬೇಕು.

ಈಗ ಒಂದು ಪ್ಯಾನ್ ಬಿಸಿ ಮಾಡಿ, ತುರಿದ ಬೂದುಗುಂಬಳಕಾಯಿಯನ್ನು ಹುರಿಯಿರಿ. ಮಂದ ಉರಿಯಲ್ಲಿ ಅದು ಬೇಯಬೇಕು. ಹಸಿ ಪರಿಮಳ ಹೋಗಿ, ಬೂದುಗುಂಬಳಕಾಯಿ ಸಾಫ್ಟ್ ಆದ ಬಳಿಕ, 1 ಕಪ್ ಸಕ್ಕರೆ, ಕೇಸರಿ ದಳ ಹಾಕಿ ಬಿಡದೇ ಕೈಯಾಡದೇ, ಮಂದ ಉರಿಯಲ್ಲಿ ಬೇಯಿಸಿ. 5ರಿಂದ 8 ನಿಮಿಷ ಸಕ್ಕರೆಯೊಂದಿಗೆ ಈ ಮಿಶ್ರಣ ಸೇರಿದ ಬಳಿಕ, ತುಪ್ಪ ಸೇರಿಸಿ.

ಈಗ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ಹಲ್ವಾದ ಹದಕ್ಕೆ ಬಂದ ಬಳಿಕ ಕೊಂಚ ಏಲಕ್ಕಿ ಪುಡಿ ಸೇರಿಸಿ, ಪ್ಯಾನ್ ಕೆಳಗಿರಿಸಿ. ಬಳಿಕ ಒಗ್ಗರಣೆ ಸೌಟಿನಲ್ಲಿ ಕೊಂಚ ತುಪ್ಪ ಹಾಕಿ, ಗೋಡಂಬಿ, ದ್ರಾಕ್ಷಿ ಹುರಿದು ಸೇರಿಸಿದರೆ, ಕಾಶಿ ಹಲ್ವಾ ರೆಡಿ.

- Advertisement -

Latest Posts

Don't Miss