Recipe: ಕಾಖ್ರಾ ಚಾಟ್ (Khakra Chat) ರೆಸಿಪಿ

Recipe: ನಮಗೆ ಚಾಟ್ ತಿನ್ನಬೇಕು ಎಂದು ಅನ್ನಿಸಿದಾಗ, ನಾವು ಮನೆಯಲ್ಲೇ ಪಾನೀಪುರಿ, ಬೇಲ್ ಪುರಿ ಅಥವಾ ಬಜ್ಜಿ ಬೋಂಡಾ ಹೀಗೆ ಏನಾದ್ರೂ ಮಾಡಿ ತಿನ್ನುತ್ತೇವೆ. ಅಥವಾ ಪೇಟೆಗೆ ಹೋಗಿ, ತಿಂಡಿ ಖರೀದಿಸಿ ತಿನ್ನುತ್ತೇವೆ. ಆದರೆ ನಾವಿಂದು ಡಿಫ್ರೆಂಟ್ ಆಗಿರುವ ಚಾಟ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ನೀವು 1 ಪ್ಯಾಕ್ ಕಾಖ್ರಾ ಖರೀದಿಸಿದರೆ ಸಾಕು 5ರಿಂದ 6 ಬಾರಿ ಈ ಚಾಟ್ ಮಾಡಿ ಸೇವಿಸಬಹುದು.

ಬೇಕಾಗುವ ಸಾಮಗ್ರಿ: ಕಾಖ್ರಾ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾರೇಟ್ ತುರಿ, ಬೇಕಾದರೆ ಸೌತೇತುರಿ, ಚಾಟ್ ಮಸಾಲೆ, ಖಾರದ ಪುಡಿ, ಗರಂ ಮಸಾಲೆ, ಹುಳಿ ಮತ್ತು ಗ್ರೀನ್ ಚಟ್ನಿ, ದಾಳಿಂಬೆ ಕಾಳು, ಬೂಂದಿ ಕಾಳು, ಸೇವ್, ಬೇಯಿಸಿದ ಆಲೂಗಡ್ಡೆ, ಬಟಾಣಿ, ಉಪ್ಪು, ಕೊತ್ತೊಂಬರಿ ಸೊಪ್ಪು, ಸಕ್ಕರೆ ಬೆರೆಸಿ ಫ್ರಿಜ್‌ನಲ್ಲಿ ಇರಿಸಿದ ಮೊಸರು.

ಮಾಡುವ ವಿಧಾನ: 1 ಪ್ಲೇಟ್‌ನಲ್ಲಿ ಕಾಖ್ರಾ ಹಾಕಿ ಅದರ ಮೇಲೆ ಬೇಯಿಸಿದ ಆಲೂ, ಬಟಾಣಿ ಹಾಕಿ ನಂತರ ಸ್ವಲ್ಪ ಚಾಟ್ ಮಸಾಲೆ, ಖಾರದ ಪುಡಿ, ಗರಂ ಮಸಾಲೆ ಹಾಕಿ. ನಂತರ ಮೊಸರು, ಈರುಳ್ಳಿ, ಕ್ಯಾರೇಟ್, ಸೌತೇ, ಹುಳಿ ಮತ್ತು ಗ್ರೀನ್ ಚಟ್ನಿ, ದಾಳಿಂಬೆ, ಬೂಂದಿ, ಸೇವ್, ಕೊತ್ತೊಂಬರಿ ಸೊಪ್ಪು, ಮತ್ತೆ ಸ್ವಲ್ಪ ಚಾಟ್ ಮಸಾಲೆ, ಖಾರದ ಪುಡಿ, ಗರಂ ಮಸಾಲೆ ಹಾಕಿ ಸರ್ವ್ ಮಾಡಿ.

About The Author