Wednesday, July 2, 2025

Latest Posts

Recipe: ಕೋಲ್ಹಾಪುರಿ ಪನೀರ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 10 ಕ್ಯೂಬ್ಸ್ ಪನೀರ್, 3 ಸ್ಪೂನ್ ಎಣ್ಣೆ, 2 ಈರುಳ್ಳಿ, 3 ಟೊಮೆಟೊ , ಶುಂಠಿ- ಬೆಳ್ಳುಳ್ಳಿ ಪೆಸ್ಟ್, 1 ಪಲಾವ್ ಎಲೆ, ತುಪ್ಪ, ಕೊತ್ತೊಂಬರಿ ಸೊಪ್ಪು, ಉಪ್ಪು.

ಮಸಾಲೆ ರೆಡಿ ಮಾಡಲು 1 ಸ್ಪೂನ್ ಎಳ್ಳು, 1 ಸ್ಪೂನ್ ಗಸಗಸೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಕೊತ್ತೊಂಬರಿ ಕಾಳು, 3 ಲವಂಗ, ಚಕ್ಕೆ, 2 ಏಲಕ್ಕಿ, ಕಾಳುಮೆಣಸು, 3 ಕೆಂಪು ಮೆಣಸು, ಕಾಲು ಕಪ್ ಒಣಕೊಬ್ಬರಿ ತುರಿ.

ಮಾಡುವ ವಿಧಾನ:ಮಸಾಲೆ ರೆಡಿ ಮಾಡಲು 1 ಸ್ಪೂನ್ ಎಳ್ಳು, 1 ಸ್ಪೂನ್ ಗಸಗಸೆ, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಕೊತ್ತೊಂಬರಿ ಕಾಳು, 3 ಲವಂಗ, ಚಕ್ಕೆ, 2 ಏಲಕ್ಕಿ, ಕಾಳುಮೆಣಸು, 3 ಕೆಂಪು ಮೆಣಸು, ಕಾಲು ಕಪ್ ಒಣಕೊಬ್ಬರಿ ತುರಿ, ಇವೆಲ್ಲವನ್ನೂ ಎಣ್ಣೆಇಲ್ಲದೇ ಹುರಿದು, ತರಿ ತರಿಯಾಗಿ ಪುಡಿ ಮಾಡಿ.

ಅದೇ ಪ್ಯಾನ್ ಬಿಸಿ ಮಾಡಿ ತುಪ್ಪ ಅಥವಾ ಎಣ್ಣೆ ಹಾಕಿ ಪನೀರ್ ಹುರಿಯಿರಿ. ಬಳಿಕ ಪನೀರ್ ಬದಿಗಿರಿಸಿ, ಅದೇ ಪ್ಯಾನ್‌ಗೆ ಮತ್ತೆ ಎಣ್ಣೆ ಅಥವಾ ತುಪ್ಪ ಹಾಕಿ, ಪಲಾವ್ ಎಲೆ, ಈರುಳ್ಳಿ, ಟೊಮೆಟೊ , ಶುಂಠಿ- ಬೆಳ್ಳುಳ್ಳಿ ಪೆಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ಇವೆಲ್ಲವೂ ಸರಿಯಾಗಿ ಬೆಂದ ಬಳಿಕ, ಪ್ಯಾನ್‌ನಲ್ಲೇ ಇದನ್ನು ಮ್ಯಾಶ್ ಮಾಡಿ.

ನಂತರ ಇದಕ್ಕೆ ರೆಡಿ ಮಾಡಿದ ಮಸಾಲೆ, ಉಪ್ಪು, ಅರಿಶಿನ, ನೀರು, ಹಾಕಿ ಕುದಿ ಬರಿಸಿ. ಬಳಿಕ ಹುರಿದ ಪನೀರ್, ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು, ಹಾಕಿ ಗ್ಯಾಸ್ ಆಫ್ ಮಾಡಿ. ಈಗ ಕೋಲ್ಹಾಪುರಿ ಪನೀರ್ ರೆಡಿ. ಇದನ್ನು ನಾನ್, ಕುಲ್ಚಾ, ಚಪಾತಿ ಜತೆ ಸವಿಯಬಹುದು.

- Advertisement -

Latest Posts

Don't Miss