Recipe: ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ ಮಸಾಲೆ, ಖಾರದ ಪುಡಿ, 2 ಸ್ಪೂನ್ ಕ್ರೀಮ್, 1 ಸ್ಪೂನ್ ಕಸೂರಿ ಮೇಥಿ, 1 ಪಲಾವ್ ಎಲೆ, ಚಕ್ಕೆ, ಲವಂಗ, ಕಾಳುಮೆಣಸು, ಏಲಕ್ಕಿ, ಉಪ್ಪು.
ಮಾಡುವ ವಿಧಾನ: ಕುದಿಯುವ ನೀರಿಗೆ ಉಪ್ಪು, ಸ್ವಚ್ಛವಾಗಿಸಿದ ಪಾಲಕ್ ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ಬಿಸಿ ಮಾಡಿ. ಬಳಿಕ ಪಾಲಕ್‌ನ್ನು ಐಸ್ ನೀರಿಗೆ ಹಾಕಿ. ಬಳಿಕ ಮಿಕ್ಸಿ ಜಾರ್‌ಗೆ ಹಾಕಿ, ಪುದೀನಾ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ, 5 ಬೆಳ್ಳುಳ್ಳಿ ಎಸಳು ಹಾಕಿ ರುಬ್ಬಿ.
ಬಳಿಕ ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ ಪನೀರ್ ಮತ್ತು ಬೆಳ್ಳುಳ್ಳಿ ಹುರಿಯಿರಿ. ಅದನ್ನು ಬದಿಗಿರಿಸಿ, ಮತ್ತೆ ಪ್ಯಾನ್‌ಗೆ ಎಣ್ಣೆ ಅಥವಾ ತುಪ್ಪ ಹಾಕಿ, ಪಾಲಕ್ ಎಲೆ, ಏಲಕ್ಕಿ, ಲವಂಗ, ಚಕ್ಕೆ, ಕಾಲುಮೆಣಸು, ಜೀರಿಗೆ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ Tomato ಹಾಕಿ ಹುರಿಯಿರಿ. ಬಳಿಕ ರುಬ್ಬಿದ ಪಾಲಕ್ ಹಾಕಿ ಹಸಿ ವಾಸನೆ ಹೋಗುವವರೆಗೂ ಕುದಿಸಿ. ಖಾರದಪುಡಿ, ಅರಿಶಿನ, ಗರಂಮಸಾಲೆ, ಚಾಟ್ ಮಸಾಲೆ ಹಾಕಿ ಮಿಕ್ಸ್ ಮಾಡಿ.
ಬಳಿಕ ಹುರಿದ ಪನೀರ್, ಬೆಳ್ಳುಳ್ಳಿ ಹಾಕಿ, ಕಸೂರಿ ಮೇಥಿ , ನೀರು, ಕ್ರೀಮ್, ಉಪ್ಪು ಹಾಕಿ 1 ಕುದಿ ಬರಿಸಿದರೆ, ಲಸೂನಿ ಪಾಲಕ್ ಪನೀರ್ ರೆಡಿ.