Recipe: ಇನ್‌ಸ್ಟಂಟ್ ಚಟ್ನಿಪುಡಿ ರೆಸಿಪಿ ತಿಳಿಯಿರಿ, ದೋಸೆ, ಇಡ್ಲಿ, ಅನ್ನ, ಚಪಾತಿ ಎಲ್ಲದಕ್ಕೂ ಮ್ಯಾಚ್ ಆಗತ್ತೆ..

Recipe: ಬೇಕಾಗುವ ಸಾಮಗ್ರಿ: 1 ಕಪ್ ಶೇಂಗಾ, ಕಾಲು ಕಪ್ ಹುರಿಗಡಲೆ, 10 ಎಸಳು ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ಸ್ವಲ್ಪ ಜೀರಿಗೆ, 2 ಸ್ಪೂನ್ ತೆಂಗಿನ ಎಣ್ಣೆ, ಕೊತ್ತೊಂಬರಿ ಸೊಪ್ಪು, ಖಾರ ಬೇಕಾದಷ್ಟು ಖಾರದ ಪುಡಿ, ಸ್ವಲ್ಪ ಸಕ್ಕರೆ ಅಥವಾ ಬೆಲ್ಲ, ಅವಶ್ಯಕತೆ ಇರುವಷ್ಟು ಉಪ್ಪು.

ಮಾಡುವ ವಿಧಾನ: ಶೇಂಗಾ, ಹುರಿಗಡಲೆ, ಬೆಳ್ಳುಳ್ಳಿ, ಕರಿಬೇವು, ಜೀರಿಗೆಯನ್ನು ಸಪರೇಟ್ ಆಗಿ ಹುರಿಯಿರಿ. ಬಳಿಕ ಕೊತ್ತೊಂಬರಿ ಸೊಪ್ಪನ್ನು ಸ್ವಲ್ಪ ಬಿಸಿ ಮಾಡಿ. ಬಳಿಕ, ಮಿಕ್ಸಿ ಜಾರ್‌ಗೆ , ಹುರಿದ ಎಲ್ಲ ಮಿಶ್ರಣದ ಜತೆ ಬೆಲ್ಲ ಅಥವಾ ಸಕ್ಕರೆ, ಎಣ್ಣೆ, ಉಪ್ಪು ಎಲ್ಲವನ್ನೂ ಸೇರಿಸಿ, ತರಿ ತರಿಯಾಗಿ ಪುಡಿ ಮಾಡಿದ್ರೆ, ಚಟ್ನಿಪುಡಿ ರೆಡಿ.

ಇದನ್ನು ನೀವು ಬಿಸಿ ಬಿಸಿ ಅನ್ನ ತುಪ್ಪ, ಇಡ್ಲಿ ತುಪ್ಪ, ದೋಸೆ, ಚಪಾತಿ ಜತೆ ಸವಿಯಬಹುದು.

About The Author