Friday, November 28, 2025

Latest Posts

Recipe: ಈ ರೀತಿ ಚಿಪ್ಸ್ ಮನೆಯಲ್ಲೇ ಮಾಡಿ ತಿನ್ನಿ

- Advertisement -

ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿಹುಡಿ, 4 ಸ್ಪೂನ್ ತುಪ್ಪ, ಕಾಲು ಕಪ್ ಪಾಲರ್ ಪ್ಯೂರಿ, ಕಾಲು ಕಪ್ ಬೀಟ್‌ರೂಟ್ ಪ್ಯೂರಿ, 2 ಸ್ಪೂನ್ ಎಳ್ಳು, ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ನೀರು ಬಿಸಿ ಮಾಡಿ, ಬಿಸಿ ನೀರಿಗೆ ತುಪ್ಪ, ಚಿಲ್ಲಿ ಫ್ಲೇಕ್ಸ್, ಉಪ್ಪು, ಅಕ್ಕಿಹುಡಿ ಹಾಕಿ 2ರಂದ 3 ನಿಮಿಷ ಮಿಕ್ಸ್ ಮಾಡಿ. ಬಳಿಕ 1 ನಿಮಿಷ ಮಂದ ಉರಿಯಲ್ಲಿ ಇದನ್ನು ಹಾಗೇ ಬಿಡಿ, ನಂತರ ಗ್ಯಾಸ್ ಆಫ್ ಮಾಡಿ.

ಈ ಮಿಶ್ರಣ ತಣ್ಣಗಾದ ಬಳಿಕ ಇದರಲ್ಲಿ ಮೂರು ಭಾಗಗಳಾಗಿ ವಿಂಗಡಿಸಿ. 1 ಭಾಗ ಹಾಗೇ ಇರಲಿ. ಉಳಿದ 2 ಭಾಗಗಳಿಗೆ ಪಾಲಕ್ ಪ್ಯೂರಿ ಮತ್ತು ಬೀಟ್‌ರೂಟ್ ಪ್ಯೂರಿ, ಎಳ್ಳು ಹಾಕಿ ಮಿಕ್ಸ್ ಮಾಡಿ. ಈಗ ಈ ರೆಡಿಯಾದ ಮಿಶ್ರಣದಿಂದ ಬಾಲ್ ತಯಾರಿಸಿ, ಲಟ್ಟಿಸಿ ಸಣ್ಣ ಸಣ್ಣ ಚಿಪ್ಸ್ ಶೇಪ್ ನೀಡಿ.

ಬಳಿಕ ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಇದನ್ನು ಕರಿದರೆ, ಆರೋಗ್ಯಕರ ಚಿಪ್ಸ್ ರೆಡಿ. ಪೇಟೆಯಿಂದ ತರುವ ಸ್ನ್ಯಾಕ್ಸ್‌ಗಿಂತ ಮನೆಯಲ್ಲೇ ಈ ರೀತಿ ಕರಿದ ತಿಂಡಿ ಮಾಡೋದು ಉತ್ತಮ.

- Advertisement -

Latest Posts

Don't Miss