Recipe: ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಮಾಡಿಕೊಡಿ ಮಖಾನಾ ಖೀರ್

Recipe: ಬೇಕಾಗುವ ಸಾಮಗ್ರಿ: 4 ಸ್ಪೂನ್ ತುಪ್ಪ, 1 ಬೌಲ್ ಮಖಾನಾ, 10ರಿಂದ 15 ಗೋಡಂಬಿ ಬೀಜ, ಅರ್ಧ ಲೀ. ದಪ್ಪ ಹಾಲು, ನೆನೆಸಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿದ ಬಾದಾಮಿ, ಪಿಸ್ತಾ, ಗೋಡಂಬಿ, ಸ್ವಲ್ಪ ಹಾಲಲ್ಲಿ ನೆನೆಸಿದ ಕೇಸರಿ, ಅರ್ಧ ಕಪ್ ಸಕ್ಕರೆ.

ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ, ಮಖಾನಾವನ್ನು ಹುರಿಯಿರಿ. ಬಳಿಕ ತಣ್ಣಗಾದ ಮೇಲೆ ಅರ್ಧ ಮಖಾನಾವನ್ನು, ಸ್ವಲ್ಪ ಗೋಡಂಬಿಯ ಜತೆ ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ. ಅರ್ಧ ಮಖಾನಾ ಹಾಗೇ ಇರಿಸಿ.

ಬಳಿಕ ಪ್ಯಾನ್‌ನಲ್ಲಿ ಹಾಲು ಬಿಸಿ ಮಾಡಿ, ಹಾಲು ಕುದಿ ಬಂದ ಬಳಿಕ, ಪುಡಿ ಮಾಡಿದ ಮಖಾನಾವನ್ನು ಹಾಕಿ, ಗಂಟು ಬಾರದಂತೆ ಮಿಕ್ಸ್ ಮಾಡಿ. ನಂತರ ಹಾಲಿನಲ್ಲಿ ನೆನೆಸಿದ ಕೇಸರಿ, ಸಕ್ಕರೆ, ನೆನೆಸಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾ, ಗೋಡಂಬಿ, ಉಳಿದಿದ್ದ ಮಖಾನಾ ಹಾಕಿ ಮಿಕ್ಸ್ ಮಾಡಿದ್ರೆ ಮಖಾನಾ ಖೀರ್ ರೆಡಿ. ನೀವು ಇದನ್ನು ಫ್ರಿಜ್‌ನಲ್ಲಿರಿಸಿ, ಕೂಲ್ ಆದಾಗೂ ಸವಿಯಲು ನೀಡಬಹುದು.

About The Author