Recipe: ಸಂಜೆ ಚಹಾ ಕುಡಿಯುವ ಹೊತ್ತಿನಲ್ಲಿ ಅಥವಾ ರಾತ್ರಿ ಊಟದ ಬದಲು ತಿಂಡಿ ತಿನ್ನಬೇಕು ಅಂದ್ರೆ ನೀವು ಮಂಗಳೂರು ಶೈಲಿಯ ಬನ್ಸ್ ತಯಾರಿಸಿ ತಿನ್ನಬಹುದು. ಇದಕ್ಕೆ ಅರ್ಧ ದಿನ ಮುಂಚೆಯೇ ಪ್ರಿಪೇರ್ ಮಾಡಬೇಕು ಅನ್ನೋದು ಬಿಟ್ರೆ, ಇದು ಈಸಿಯಾಗಿ ತಯಾರಿಸಬಹುದಾದ ರೆಸಿಪಿ. ಹಾಗಾದ್ರೆ ಇದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಎರಡು ಕಪ್ ಮೈದಾ, 10 ಬಾಳೆಹಣ್ಣು, ಮೂರು ಸ್ಪೂನ್ ಸಕ್ಕರೆ, ಒಂದು ಸ್ಪೂನ್ ಜೀರಿಗೆ, ಒಂದು ಕಪ್ ಗಟ್ಟಿ ಮೊಸರು, ಅರ್ಧ ಸ್ಪೂನ್ ಬೇಕಿಂಗ್ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಒಂದು ಮಿಕ್ಸಿಂಗ್ ಬೌಲ್ಗೆ ಬಾಳೆಹಣ್ಣು, ಉಪ್ಪು, ಸಕ್ಕರೆ, ಜೀರಿಗೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಬೇಕು. ಬಳಿಕ ಮೈದಾ, ಮೊಸರು, ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಕಲಿಸಿ, ಸಾಫ್ಟ್ ಹಿಟ್ಟು ರೆಡಿ ಮಾಡಬೇಕು. ರಾತ್ರಿ ಈ ಹಿಟ್ಟನ್ನು ರೆಡಿ ಮಾಡಿಟ್ಟು, ಬೆಳಿಗ್ಗೆ ಬನ್ಸ್ ತಯಾರಿಸಬೇಕು.
ರಾತ್ರಿ ರೆಡಿ ಮಾಡಿಟ್ಟ ಹಿಟ್ಟು, ಮರುದಿನ ಸ್ವಲ್ಪ ಉಬ್ಬಿಕೊಂಡಿರುತ್ತದೆ. ಇದನ್ನು ಪೂರಿಗೆ ತಯಾರಿಸಿದಂತೆ ಉಂಡೆ ತಯಾರಿಸಿ, ದಪ್ಪ ಪೂರಿಯಂತೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿದರೆ, ಮಂಗಳೂರು ಬನ್ಸ್ ರೆಡಿ. ಬೆಳಿಗ್ಗೆ ಇದನ್ನು ತಿಂಡಿಯಂತೆ ತಿನ್ನಬಹುದು. ಅಥವಾ ಬೆಳಿಗ್ಗೆ ಹಿಟ್ಟು ರೆಡಿ ಮಾಡಿಟ್ಟು, ಸಂಜೆ ಚಹಾ ಕುಡಿಯುವ ವೇಳೆ ಬನ್ಸ್ ಮಾಡಿ ತಿನ್ನಬಹುದು. ಚಹಾ, ಕಾಫಿಯೊಂದಿಗೆ ಬನ್ಸ್ ಸವಿಯಬಹುದು. ಅಥವಾ ತೆಂಗಿನಕಾಯಿ ಚಟ್ನಿ, ಸಾಂಬಾರ್ ಬನ್ಸ್ಗೆ ಬೆಸ್ಟ್ ಕಾಂಬಿನೇಷನ್.