Health Tips: ಕೂದಲು ಉದುರುವ ಸಮಸ್ಯೆಗೆ ಮುಖ್ಯ ಕಾರಣವೇ ಇದು

Health Tips: ಇಂದಿನ ಕಾಲದಲ್ಲಿ ಯುವ ಪೀಳಿಗೆಗಿರುವ ಕಾಮನ್ ಸೌಂದರ್ಯ ಸಮಸ್ಯೆ ಅಂದ್ರೆ, ಅದು ಕೂದಲು ಉದುರುವ ಸಮಸ್ಯೆ. ಬ್ಯೂಟಿ ಪಾರ್ಲರ್‌ಗೆ ಹೋದ್ರೂ, ವಿಧ ವಿಧದ ಶ್ಯಾಂಪೂ, ಎಣ್ಣೆ ಇತ್ಯಾದಿ ಬಳಕೆ ಮಾಡಿದ್ರೂ ಏನೂ ಪ್ರಯೋಜನವಾಗುತ್ತಿಲ್ಲ.

ಯಾಕೆ ಹೀಗೆ ಅಂತಾ ಕೇಳಿದ್ರೆ, ನಾವು ತಲೆಯ ಮೇಲೆ ಅಥವಾ ಕೂದಲಿಗೆ ಏನು ಬಳಕೆ ಮಾಡುತ್ತೇವೋ ಅದು ಸಮಸ್ಯೆಗೆ ಪರಿಹಾರವೇ ಅಲ್ಲ. ಬದಲಾಗಿ ನಾವೇನು ಸೇವನೆ ಮಾಡುತ್ತೇವೋ, ಅದೇ ನಮ್ಮ ಕೂದಲು ಉದುರುವಿಕೆಗೆ ಕಾರಣ.

ನಾವು ಆರೋಗ್ಯಕರವಾದ ಆಹಾರ ಸೇವನೆ ಮಾಡಿದ್ದಲ್ಲಿ, ನಮ್ಮ ಕೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ಹೆಚ್ಚು ಜಂಕ್ ಫುಡ್ ತಿಂದ್ರೆ, ಕರಿದ ಪದಾರ್ಥಗಳ ಸೇವನೆ ಮಾಡಿದ್ರೆ, ಹೆಚ್ಚು ನೀರು ಕುಡಿಯದಿದ್ದರೆ, ನಿಮ್ಮ ಕೂದಲಿನ ಆರೋಗ್ಯ ಹಾಳಾಗುತ್ತದೆ.

ಅಲ್ಲದೇ, ಪ್ರತಿದಿನ ಡ್ರೈಫ್ರೂಟ್ಸ್, ಮಜ್ಜಿಗೆ, ಕರ್ಡ್, ಹಾಲು, ಹೀಗೆ ಪ್ರೋಟೀನ್ ಭರಿತವಾದ ಆಹಾರ, ನೀರು, ಪಾನಕ, ಹಣ್ಣಿನ ರಸ, ನೆನೆಸಿದ ಕಾಳು ಇತ್ಯಾದಿ ಆರೋಗ್ಯಕರ ಆಹಾರಗಳ ಸೇವನೆ ಮಾಡಬೇಕು. ಹೆಚ್ಚು ನೀರು ಕುಡಿಯಬೇಕು.

ಕೂದಲನ್ನು ಹೆಚ್ಚು ಗಟ್ಟಿಯಾಗಿ ಕಟ್ಟಬಾರದು. ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಹೆಚ್ಚು ಶ್ಯಾಂಪೂ ಬಳಸದೇ ಹೇರ್ ವಾಶ್ ಮಾಡಬೇಕು. ಚೆನ್ನಾಗಿ ನಿದ್ದೆ ಮಾಡಬೇಕು. ದಿಂಬು, ಹಾಸಿಗೆ ಕ್ಲೀನ್ ಆಗಿರಬೇಕು. ಅಗತ್ಯಕ್ಕಿಂತ ಹೆಚ್ಚು ಯಾವುದೇ ವಿಷಯದ ಬಗ್ಗೆ ಟೆನ್ಶನ್ ತೆಗೆದುಕ“ಳ್ಳಬಾರದು. ಇದೆಲ್ಲವೂ ನಿಮ್ಮ ಕೂದಲಿನ ಆರೋಗ್ಯವನ್ನು ಅವಲಂಬಿಸಿರುತ್ತದೆ.

ಪ್ರತಿದಿನ ಉತ್ತಮ ಆಹಾರ ಸೇವನೆ, ನಿದ್ರೆಯ ಜತೆಗೆ ಸೂರ್ಯನ ತಿಳಿ ಬಿಸಿಲಿಗೆ ನಿಂತು ವಿಟಾಮಿನ್ ಡಿ ಪಡೆಯಿರಿ. ಸೀಡ್ಸ್, ಡ್ರೈ ಫ್ರೂಟ್ಸ್, ಸ“ಪ್ಪು, ಇತ್ಯಾದಿ ನಿಮ್ಮ ಊಟದಲ್ಲಿ ಅಳವಡಿಸಿಕ“ಳ್ಳಿ. ನಿಮಗಾಗಿ ಸಮಯ ಮಾಡಿ, ಯೋಗಾ, ವ್ಯಾಯಾಮ ಮಾಡಿ. ಇವೆಲ್ಲವೂ ನಿಮ್ಮ ಕೂದಲಿನ ಸೌಂದರ್ಯವನ್ನು ವೃದ್ಧಿಸುತ್ತದೆ.

About The Author