- Advertisement -
Recipe: ನಾವಿಂದು ಸಂಜೆ ಚಹಾ ಸಮಯದಲ್ಲಿ ತಿನ್ನಬಹುದಾದ ಈಸಿ ರೆಸಿಪಿಯ ಬಗ್ಗೆ ಹೇಳಲಿದ್ದೇವೆ. ಮಂಗಳೂರು ಶೈಲಿಯ ಗೋಳಿಬಜೆ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಮೈದಾ, ಕೊಂಚ ಹಿಂಗು, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ, ಹಸಿಮೆಣಸು, ಸಣ್ಣದಾಗಿ ತುಂಡು ಮಾಡಿದ ಕಾಯಿ, ಕರಿಬೇವಿನ ಸೊಪ್ಪು, ಸಣ್ಣಗೆ ಹೆಚ್ಚಿದ ಶುಂಠಿ, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೈದಾ, ಹಿಂಗು, ಮೊಸರು, ಉಪ್ಪು, ನೀರು ಹಾಕಿ ಗೋಳಿ ಬಜಿಗೆ ಬೇಕಾದ ಹಿಟ್ಟು ರೆಡಿ ಮಾಡಿಕೊಳ್ಳಿ, 3 ಗಂಟೆ ಹಾಗೇ ಬಿಡಿ. ಬಳಿಕ ಅದಕ್ಕೆ ತುಂಡು ಮಾಡಿದ ಕಾಯಿ, ಕರಿಬೇವು, ಹಸಿಮೆಣಸು, ಶುಂಠಿ ಸೇರಿಸಿ, ಬಜಿಯ ರೀತಿ ಕಾದ ಎಣ್ಣೆಯಲ್ಲಿ ಕರಿದರೆ, ಗೋಳಿ ಬಜೆ ರೆಡಿ. ಇದನ್ನು ನೀವು ಕಾಯಿ ಚಟ್ನಿಯೊಂದಿಗೆ ಸೇವಿಸಬಹುದು.
- Advertisement -