Recipe: ಬೇಕಾಗುವ ಸಾಮಗ್ರಿ: 1 ಕಪ್ ಹುರಿಗಡಲೆ, 3 ಸ್ಪೂನ್ ಧನಿಯಾ, 1 ಸ್ಪೂನ್ ಜೀರಿಗೆ, ಸ್ವಲ್ಪ ಹಿಂಗು, 1 ಸ್ಪೂನ್ ಆಮ್ಚೂರ್ ಪುಡಿ, ಕಪ್ಪುಪ್ಪು, ಕರಿಬೇವು, 2ರಿಂದ 3 ಹಸಿಮೆಣಸು, ಸ್ವಲ್ಪ ಶುಂಠಿ, ಕೊತ್ತೊಂಬರಿ ಸೊಪ್ಪು, ಇದು ಮಸಾಲೆ ಮಾಡಲು ಬೇಕಾಗುವ ಸಾಮಗ್ರಿ.
ಉಳಿದಂತೆ, 1 ಬೌಲ್ ಹುರಿಯಕ್ಕಿ ಅಥವಾ ಚರುಮುರಿ, 1 ಕಪ್ ಸೇವು, 1 ಕಪ್ ಖಾರಾ ಬೂಂದಿ, ಸ್ವಲ್ಪ ಕ್ರಿಸ್ಪಿ ಪುರಿ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, Tomato, ಕ್ಯಾರೇಟ್, ಹುರಿದ ಶೇಂಗಾ, ಹುರಿದ ಬಟಾಣಿ, ಸ್ವಲ್ಪ ಅರಿಶಿನ, ಖಾರದ ಪುಡಿ, ಎಣ್ಣೆ, ಉಪ್ಪು.
ಮಾಡುವ ವಿಧಾನ: ಬ್ಲೆಂಡರ್‌ಗೆ ಹುರಿಗಡಲೆ, ಹುರಿದ ಜೀರಿಗೆ, ಧನಿಯಾ, ಸ್ವಲ್ಪ ಹಿಂಗು, ಅಮ್ಚೂರ್ ಪುಡಿ, ಕಪ್ಪುಪ್ಪು, ಕರಿಬೇವು, ಹಸಿಮೆಣಸು, ಸ್ವಲ್ಪ ಶುಂಠಿ, ಕೊತ್ತೊಂಬರಿ ಸೊಪ್ಪು, ಇದೆಲ್ಲವನ್ನೂ ಹಾಕಿ, ನೀರು ಹಾಕದೇ, ತರಿ ತರಿಯಾಗಿ ಮಸಾಲೆ ರುಬ್ಬಿ.
ಬಳಿಕ ಚುರುಮುರಿಯನ್ನು ಬಾಣಲೆಗೆ ಹಾಕಿ ಹುರಿಯಿರಿ. ಪಕ್ಕಕ್ಕಿರಿಸಿ. ನಂತರ ಅದೇ ಬಾಣಲೆಗೆ ಎಣ್ಣೆ, ಅರಿಶಿನ, ಖಾರದ ಪುಡಿ, ಹುರಿದ ಶೇಂಗಾ, ಮತ್ತು ಬಟಾಣಿ, ಹಾಕಿ ಮಿಕ್ಸ್ ಮಾಡಿ.
ಬಳಿಕ 1 ಮಿಕ್ಸಿಂಗ್ ಬೌಲ್‌ನಲ್ಲಿ ಹುರಿದ ಮಂಡಕ್ಕಿ, ಸೇವು, ಖಾರಾ ಬೂಂದಿ, ಪಾಪ್ಡಿ ಅಥವಾ ಕ್ರಿಸ್ಪಿ ಪೂರಿ, ಹುರಿದ ಮಸಾಲೆ ಶೇಂಗಾ, ಬಟಾಣಿ, ಈರುಳ್ಳಿ, ತುರಿದ ಕ್ಯಾರೇಟ್, ಟೋಮೆಟೋ, ಮಂಡಕ್ಕಿ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಭೇಲ್ ರೆಡಿ. ಬೇಕಾದರೆ ನೀವು ಇದರ ಜತೆ ಬೇಯಿಸಿದ ಆಲೂಗಡ್ಡೆ, ಸೌತೇಕಾಯಿ, ದಾಳಿಂಬೆ ಕೂಡ ಬಳಸಬಹುದು.




