Tuesday, September 23, 2025

Latest Posts

Recipe: ಓಟ್ಸ್- ವೆಜಿಟೇಬಲ್ ಕಟ್ಲೇಟ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಓಟ್ಸ್, 1 ಕಪ್ ಶಿಮ್ಲಾ ಮೆಣಸು (ಕ್ಯಾಪ್ಸಿಕಂ), ಬೇಯಿಸಿದ ಆಲೂಗಡ್ಡೆ, ಕ್ಯಾರೇಟ್ ತುರಿ, ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಸ್ವಲ್ಪ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ತರಿ ತರಿಯಾಗಿ ಪುಡಿ ಮಾಡಿದ ಕೊತ್ತೊಂಬರಿ ಕಾಳು, ಜೀರಿಗೆ, 1 ಸ್ಪೂನ್ ಗರಂ ಮಸಾಲೆ, ಧನಿಯಾ ಪುಡಿ, ಖಾರದ ಪುಡಿ, ಅರಿಶಿನ, ಎಣ್ಣೆ, ಉಪ್ಪು, ಸ್ವಲ್ಪ ನಿಂಬೆರಸ.

ಮಾಡುವ ವಿಧಾನ: 1 ಮಿಕ್ಸಿಂಗ್ ಬೌಲ್‌ನಲ್ಲಿ 2 ರೀತಿಯ ಶಿಮ್ಲಾ ಮೆಣಸು (ಕ್ಯಾಪ್ಸಿಕಂ), ಬೇಯಿಸಿದ ಆಲೂಗಡ್ಡೆ, ಕ್ಯಾರೇಟ್ ತುರಿ, ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ತರಿ ತರಿಯಾಗಿ ಪುಡಿ ಮಾಡಿದ ಕೊತ್ತೊಂಬರಿ ಕಾಳು, ಜೀರಿಗೆ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಅರಿಶಿನ, ಉಪ್ಪು, ನಿಂಬೆರಸ, ಓಟ್ಸ್ ಸೇರಿಸಿ ಮಿಕ್ಸ್ ಮಾಡಿ.

ಈ ಮಿಶ್ರಣವನ್ನು ಬಿಲ್ಲೆಯಾಕಾರದಲ್ಲಿ ಶೇಪ್ ನೀಡಿ. ಎಳ್ಳಿನಿಂದ ಇದನ್ನು ಕೋಟ್ ಮಾಡಿ. ಬಳಿಕ ಪ್ಯಾನ್‌ಗೆ ಎಣ್ಣೆ ಹಾಕಿ, ಇದನ್ನು ತವ್ವಾ ಫ್ರೈ ಮಾಡಿದ್ರೆ, ಆರೋಗ್ಯಕರ ಓಟ್ಸ್ ಕಟ್ಲೇಟ್ ರೆಡಿ.

- Advertisement -

Latest Posts

Don't Miss