Recipe: ಥಟ್ ಅಂತಾ ತಯಾರಿಸಬಹುದಾದ ಈರುಳ್ಳಿ ಉಪ್ಪಿನಕಾಯಿ

Recipe: ಬೇಕಾಗುವ ಸಾಮಗ್ರಿ: ಬೇಕಾಗಿರುವಷ್ಟು ಈರುಳ್ಳಿ, 1 ಸ್ಪೂನ್ ಜೀರಿಗೆ, ಮೆಂತ್ಯೆ, ಜೀರಿಗೆ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಖಾರದ ಪುಡಿ, ವಿನೇಗರ್, ಸಾಸಿವೆ ಎಣ್ಣೆ, ಹಿಂಗು, ಕಲೋಂಜಿ, ಉಪ್ಪು.

ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಜೀರಿಗೆ, ಸಾಸಿವೆ, ಮೆಂತ್ಯೆ ಹಾಕಿ ಡ್ರೈ ರೋಸ್ಟ್ ಮಾಡಿ. ತರಿ ತರಿಯಾಗಿ ಕುಟ್ಟಿ ಪುಡಿ ಮಾಡಿ.

ಈಗ 1 ಬೌಲ್‌ನಲ್ಲಿ ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ವಿನೇಗರ್, ಉಪ್ಪು,. ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ.

ಬಳಿಕ ಈಗಾಗಲೇ ರೆಡಿ ಮಾಡಿದ ಪುಡಿ ಹಾಾಕಿ. 1 ಒಗ್ಗರಣೆ ಸೌಟ್ ಬಿಸಿ ಮಾಡಿ, ಅದಕ್ಕೆ ಸಾಸಿವೆ ಎಣ್ಣೆ, ಹಿಂಗು, ಕಲೋಂಜಿ ಹಾಕಿ ಬಿಸಿ ಮಾಡಿ. ಇದನ್ನು ಈರುಳ್ಳಿಗೆ ಸೇರಿಸಿದರೆ, ಈರುಳ್ಳಿ ಉಪ್ಪಿನಕಾಯಿ ರೆಡಿ.

About The Author