Tuesday, October 14, 2025

Latest Posts

Recipe: ಪಾಲಕ್ ಚಕ್ಕುಲಿ ರೆಸಿಪಿ

- Advertisement -

Recipe: ಸಂಜೆ ಹೊತ್ತಲ್ಲಿ ಚಹಾ, ಕಾಫಿ ಕುಡಿಯುವಾಗ ಏನಾದರೂ ಕುರುಕಲು ತಿಂಡಿ ತಿನ್ನಬೇಕು ಅಂತ ಅನ್ನಿಸೋದು ಸಹಜ. ಅದಕ್ಕಾಗಿಯೇ ನೀವು ಮನೆಯಲ್ಲೇ ಸುಲಭವಾಗಿ ಪಾಲಕ್ ಚಕ್ಕುಲಿ ತಯಾರಿಸಬಹುದು. ಹಾಾಗಾದ್ರೆ ಅದನ್ನು ತಯಾರಿಸೋದು ಹೇಗೆ..? ಅದಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿಹಿಟ್ಟು, 1 ಕಪ್ ಕಡ್ಲೆಹಿಟ್ಟು, ಒಂದು ಬೌಲ್ ಪಾಲಕ್, ಎರಡು ಮೆಣಸಿನಕಾಯಿ, ಹಿಂಗು, ವೋಮ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಪಾಲಕ್, ಹಸಿಮೆಣಸಿನಕಾಯಿ, ಉಪ್ಪು ಹಾಕಿ ರುಬ್ಬಿ ಪೇಸ್ಟ್ ತಯಾರಿಸಿ. ಇನ್ನೊಂದು ಬೌಲ್‌ನಲ್ಲಿ 2 ಕಪ್ ಅಕ್ಕಿ ಹಿಟ್ಟು, 1 ಕಪ್ ಕಡ್ಲೆಹಿಟ್ಟು, ಉಪ್ಪು ಹಾಕಿ ಮಿಕ್ಸ್ ಮಾಡಿ, ಜರಡಿ ಮಾಡಿ. ಬಳಿಕ ಕೊಂಚ ಹಿಂಗು, ವೋಮ, ನೀರು, ಪಾಲಕ್ ಪೇಸ್ಟ್  ಮಿಕ್ಸ್ ಮಾಡಿ, ಬಿಸಿ ಮಾಡಿದ ಎಣ್ಣೆ ಹಾಕಿ ಚಕ್ಕುಲಿ ಹಿಟ್ಟು ತಯಾರಿಸಿ. ಈಗ ಚಕ್ಕುಲಿ ಅಚ್ಚಿನ ಸಹಾಯದಿಂದ ಚಕ್ಕುಲಿ ಮಾಡಿ, ಎಣ್ಣೆಯಲ್ಲಿ ಕರಿದರೆ, ಪಾಲಕ್‌ ಚಕ್ಕುಲಿ ರೆಡಿ.

- Advertisement -

Latest Posts

Don't Miss