Friday, December 6, 2024

Latest Posts

Recipe: ಮನೆಯಲ್ಲಿ ಸುಲಭವಾಗಿ ತಯಾರಿಸಿ ಬೆಲ್ಲದ ಶೀರಾ

- Advertisement -

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಂಬೆ ರವೆ, 1 ಕಪ್ ಬೆಲ್ಲದ ಪುಡಿ,  ಅರ್ಧ ಕಪ್ ತುಪ್ಪ, ದ್ರಾಕ್ಷಿ, ಬಾದಾಮಿ, ಕಾಜು ಹೀಗೆ ನಿಮಗೆ ಬೇಕಾದ ಡ್ರೈಫ್ರೂಟ್ಸ್ ಬಳಸಬಹುದು. ಬಳಸದೇ ಇದ್ದರೂ ಆದೀತು. 2 ಸ್ಪೂನ್ ಹಾಲಲ್ಲಿ ನೆನೆಸಿಟ್ಟ ಕೇಸರಿ ದಳ, ಕೆಲವರು ಕರ್ಪೂರ ಬಳಕೆ ಮಾಡುತ್ತಾರೆ. ಅವಶ್ಯಕತೆ ಇದ್ದಲ್ಲಿ ಬಳಸಬಹುದು. ಚಿಟಿಕೆ ಏಲಕ್ಕಿ ಪುಡಿ. ಇವಿಷ್ಟು ಬೆಲ್ಲದ ಶೀರಾ ಮಾಡಲು ಬೇಕಾಗುವ ರೆಸಿಪಿ.

ಮಾಡುವ ವಿಧಾನ: ಮೊದಲು ತುಪ್ಪ ಬಿಸಿ ಮಾಡಿ, ಡ್ರೈಫ್ರೂಟ್ಸ್ ಹುರಿದು ಬದಿಗಿರಿಸಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ, ರವೆ ಹುರಿಯಿರಿ. ರವೆಯ ಘಮ ಬಂದ ಬಳಿಕ, 2 ಕಪ್ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಸೇರಿಸಿ. ಬಳಿಕ ಏಲಕ್ಕಿ ಪುಡಿ, ಕೇಸರಿ ಸೇರಿಸಿ.

ನಂತರ ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, 5 ನಿಮಿಷ ಬಿಡದೇ ಕೈಯಾಡಿಸಿ. ಬಳಿಕ ಮತ್ತೆ ಸ್ವಲ್ಪ ತುಪ್ಪ ಮತ್ತು ಹುರಿದ ಡ್ರೈಫ್ರೂಟ್ಸ್ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಬೆಲ್ಲದ ಶೀರಾ ರೆಡಿ.

- Advertisement -

Latest Posts

Don't Miss