- Advertisement -
Recipe: ಬೇಕಾಗುವ ಸಾಮಗ್ರಿ: 1 ಕಪ್ ಸಣ್ಣಗೆ ಹೆಚ್ಚಿದ ಪಾಲಕ್, ಸಣ್ಣಗೆ ಹೆಚ್ಚಿದ ಶುಂಟಿ, ಹಸಿಮೆಣಸು, ಬೆಳ್ಳುಳ್ಳಿ, ಸ್ವಲ್ಪ ಕಸೂರಿ ಮೇಥಿ, ಸ್ವಲ್ಪ ಅರಿಶಿನ, 1 ಸ್ಪೂನ್ ಧನಿಯಾ ಪುಡಿ, ಸ್ವಲ್ಪ ಹಿಂಗು, ವೋಮ, ಕಾಲು ಕಪ್ ಕಡಲೆ ಹುಡಿ, 3 ಸ್ಪೂನ್ ಅಕ್ಕಿ ಹುಡಿ, ಎಣ್ಣೆ, ಉಪ್ಪು.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಪಾಲಕ್, ಶುಂಟಿ, ಹಸಿಮೆಣಸು, ಬೆಳ್ಳುಳ್ಳಿ, ಕಸೂರಿ ಮೇಥಿ, ಅರಿಶಿನ, ಧನಿಯಾ ಪುಡಿ, ಹಿಂಗು, ವೋಮ, ಕಡಲೆ ಹುಡಿ, ಅಕ್ಕಿ ಹುಡಿ, ಉಪ್ಪು, ನೀರು ಹಾಕಿ ಮಿಕ್ಸ್ ಮಾಡಿ. ಆದರೆ ಈ ಬ್ಯಾಟರ್ ಹೆಚ್ಚು ತೆಳ್ಳಗಿರಬಾರದು. ಬಜ್ಜಿ ಹಿಟ್ಟಿನಂತಿರಲಿ.
ಈಗ ಪ್ಯಾನ್ ಬಿಸಿ ಮಾಡಿ, ಎಣ್ಣೆ ಅಥವಾ ತುಪ್ಪ ಸವರಿ ಸೆಟ್ ದೋಸೆಯಂತೆ ಈ ಹಿಟ್ಟನ್ನು ಹಾಕಿ, ಮುಚ್ಚಳ ಮುಚ್ಚಿ ಬೇಯಿಸಿದರೆ, ಪಾಲಕ್ ಥಾಲಿಪಿಟ್ಟು ರೆಡಿ. ಕಾಯಿ ಚಟ್ನಿ ಜತೆ ಇದನ್ನು ಸವಿಯಬಹುದು.
- Advertisement -

