Recipe: ಅತೀ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು ಪನೀರ್ ಬಟರ್ ಮಸಾಲಾ

Recipe: ಬೇಕಾಗುವ ಸಾಮಗ್ರಿ: ಪನೀರ್, ಈರುಳ್ಳಿ, ಟೋಮೆಟೋ, 4ರಿಂದ 5 ಸ್ಪೂನ್ ಬೆಣ್ಣೆ, 4ರಿಂದ 5 ಗೋಡಂಬಿ, ಕಸೂರಿ ಮೇಥಿ, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಗರಂ ಮಸಾಲೆ, ಖಾರದ ಪುಡಿ, ಕ್ರೀಮ್, ಉಪ್ಪು.

ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ಅದಕ್ಕೆ ಬೆಣ್ಣೆ ಹಾಕಿ, ಸ್ವಲ್ಪ ಉಪ್ಪು ಖಾರ ಹಾಕಿ ಪನೀರ್ ಹುರಿಯಿರಿ. ಅದನ್ನು ಬದಿಗಿರಿಸಿ. ಮಿಕ್ಸಿ ಜಾರ್‌ನಲ್ಲಿ ಟೋಮೆಟೋ, ಗೋಡಂಬಿ, ಶುಂಠಿ- ಬೆಳ್ಳುಳ್ಳಿ ಪೆಸ್ಟ್ ಹಾಕಿ ರುಬ್ಬಿ.

ನಂತರ ಮತ್ತೆ ಪ್ಯಾನ್ ಬಿಸಿ ಮಾಡಿ ಬೆಣ್ಣೆ ಹಾಕಿ, ಈರುಳ್ಳಿ ಹುರಿಯಿರಿ. ಇದಕ್ಕೆ ರುಬ್ಬಿದ ಮಿಶ್ರಣ, ಖಾರದ ಪುಡಿ, ಅರಿಶಿನ ಹುಡಿ, ಗರಂ ಮಸಾಲೆ, ಉಪ್ಪು ಹಾಕಿ 2 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಹಸಿ ವಾಸನೆ ಹೋಗುವವರೆಗೂ ಬೇಯಿಸಿ.

ನಂತರ ಹುರಿದ ಪನೀರ್ ಸೇರಿಸಿ, ಮಿಕ್ಸ್ ಮಾಡಿ ಮತ್ತೆ 1 ನಿಮಿಷ ಮದ್ಯ ಉರಿಯಲ್ಲಿ ಬೇಯಿಸಿ. ನಂತರ ಕಸೂರಿ ಮೇಥಿ, ಕ್ರೀಮ್ ಬೆರೆಸಿದರೆ, ಪನೀರ್ ಬಟರ್ ಮಸಾಲಾ ರೆಡಿ.

About The Author