Recipe: ಬೇಕಾಗುವ ಸಾಮಗ್ರಿ: 2 ಕಪ್ ತುರಿದ ಪನೀರ್, 1 ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ, 1 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಕಪ್ ಕ್ಯಾರೆಟ್ ತುರಿ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಆಮ್ಚುರ್ ಪುಡಿ, 1 ಸ್ಪೂನ್ ಗರಂ ಮಸಾಲೆ, ಉಪ್ಪು, ಕಾಾಲು ಕಪ್ ಕಾರ್ನ್ ಫ್ಲೋರ್, 2 ಸ್ಪೂನ್ ಮೈದಾ, ಪೆಪ್ಪರ್ ಪುಡಿ, ಉಪ್ಪು, ಬ್ರೆಡ್ ಕ್ರಂಬ್ಸ್ ಅಥವಾ ರವಾ, ಕರಿಯಲು ಎಣ್ಣೆ.
ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ತುರಿದ ಪನೀರ್, ಬೇಯಿಸಿ ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್ ತುರಿ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಖಾರದ ಪುಡಿ, ಆಮ್ಚುರ್ ಪುಡಿ, ಗರಂ ಮಸಾಲೆ, ಉಪ್ಪು, 2 ಸ್ಪೂನ್ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ.
ಈಗ ಚಿಕ್ಕ ಬೌಲ್‌ನಲ್ಲಿ ಮೈದಾ, 2 ಸ್ಪೂನ್ ಕಾರ್ನ್ ಫ್ಲೋರ್, ಪೆಪ್ಪರ್ ಪುಡಿ ಮತ್ತು ನೀರು ಹಾಕಿ ಪೇಸ್ಟ್ ತಯಾರಿಸಿ. ಬಳಿಕ ಈಗಾಗಲೇ ಮಿಕ್ಸ್ ಮಾಡಿರುವ ಮಿಶ್ರಣದಿಂದ ಕಟ್ಲೇಟ್ ಶೇಪ್ ಮಾಡಿ, ಮೈದಾ- ಕಾರ್ನ್‌ಫ್ಲೋರ್ ಮಿಶ್ರಣದಲ್ಲಿ ಅದ್ದಿ, ರವಾ ಅಥವಾ ಬ್ರೆಡ್ ಕ್ರಂಬ್ಸ್‌ನಲ್ಲಿ ಡಿಪ್ ಮಾಡಿ, ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿದರೆ, ಪನೀರ್ ಕಟ್ಲೇಟ್ ರೆಡಿ.