Recipe: ಬಟಾಣಿ ಕಟ್ಲೆಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಬಟಾಣಿ, ಸ್ವೀಟ್‌ಕಾರ್ನ್, ಪಾಲಕ್, ಪನೀರ್ ಎಲ್ಲವೂ ಕಾಲು ಕಪ್ ಇರಲಿ. 4ರಿಂದ 5 ಎಸಳು ಬೆಳ್ಳುಳ್ಳಿ, ಹಸಿಮೆಣಸು, ಕಾಲು ಕಪ್ ಅಕ್ಕಿ ಹುಡಿ ಮತ್ತು ಕಡಲೆ ಹುಡಿ, ಜೀರಿಗೆ, 1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಕೊತ್ತೊಂಬರಿ ಸೊಪ್ಪು, ಉಪ್ಪು, ಎಣ್ಣೆ.

ಮಾಡುವ ವಿಧಾನ: ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಹಸಿಮೆಣಸು, ಬೆಳ್ಳುಳ್ಳಿ, ಬಟಾಣಿ, ಕಾರ್ನ್ ಹಾಕಿ ಸ್ವಲ್ಪ ಹುರಿಯಿರಿ. ನಂತರ ಪಾಲಕ್, ಪನೀರ್, ಉಪ್ಪು ಹಾಕಿ 2 ನಿಮಿಷ ಹುರಿಯಿರಿ. ನಂತರ ಮುಚ್ಚಳ ಮುಚ್ಚಿ ಮಂದ ಉರಿಯಲ್ಲಿ ಸ್ವಲ್ಪ ಬೇಯಿಸಿ.

ನಂತರ ಈ ಮಿಶ್ರಣ ತಣ್ಣಗಾಗಲು ಬಿಡಿ. ಬಳಿಕ ಮಿಶ್ರಣದಲ್ಲಿ ಅರ್ಧ ಭಾಗ ತರಿ ತರಿಯಾಗಿ ರುಬ್ಬಿ, ಉಳಿದಿರುವ ಅರ್ಧ ಭಾಗಕ್ಕೆ ಮಿಕ್ಸ್ ಮಾಡಿ.

ಬಳಿಕ ಈ ಮಿಶ್ರಣಕ್ಕೆ, ಕಾಲು ಕಪ್ ಅಕ್ಕಿ ಹುಡಿ ಮತ್ತು ಕಡಲೆ ಹುಡಿ,  1 ಸ್ಪೂನ್ ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಸ್ವಲ್ಪ ನಿಂಬೆ ರಸ ಮತ್ತು ಚಾಟ್ ಮಸಾಲೆ ಸೇರಿಸಿ, ಕಟ್ಲೆಟ್ ರೀತಿ ಶೇಪ್ ನೀಡಿ, ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿದರೆ, ಬಟಾಣಿ ಕಟ್ಲೇಟ್ ರೆಡಿ.

About The Author