Wednesday, July 2, 2025

Latest Posts

Recipe: ಬಟಾಣಿ ಕಚೋರಿ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 1 ಕಪ್ ಮೈದಾ, 1 ಸ್ಪೂನ್ ರವಾ, ಕಾಲು ಕಪ್ ತುಪ್ಪ, 1 ಸ್ಪೂನ್ ವೋಮ 1 ಕಪ್ ಬೇಯಿಸಿದ ಬಟಾಣಿ, ಶುಂಠಿ, 2 ಹಸಿಮೆಣಸು, ಅರ್ಧ ಸ್ಪೂನ್ ಜೀರಿಗೆ, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಹಿಂಗು, ಆಮ್ಚುರ್ ಮಸಾಲೆ, ಸೋಂಪು, ಕೊತ್ತೊಂಬರಿ ಸೊಪ್ಪು, ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಮೈದಾ, ರವಾ, ತುಪ್ಪ, ಉಪ್ಪು, ವೋಮ, ನೀರು ಹಾಕಿ ಕಚೋರಿ ಹಿಟ್ಟು ತಯಾರಿಸಿ. ಇದಕ್ಕೆ ಕಾಟನ್ ಬಟ್ಟೆ ಕವರ್ ಮಾಡಿ ಪಕ್ಕಕ್ಕಿರಿಸಿ.

ಈಗ ಹೂರಣ ಮಾಡಲು ಬಟಾಣಿ ಮತ್ತು ಶುಂಠಿ, ಹಸಿಮೆಣಸನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿ ತರಿಯಾಗಿ ರುಬ್ಬಿ. ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಇದಕ್ಕೆ ಜೀರಿಗೆ, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಹಿಂಗು, ಆಮ್ಚುರ್ ಮಸಾಲೆ, ಸೋಂಪು, ಹಾಕಿ ಹುರಿಯಿರಿ. ಬಳಿಕ ರುಬ್ಬಿದ ಬಟಾಣಿ, ಉಪ್ಪು, ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿದ್ರೆ ಹೂರಣ ರೆಡಿ.

ಈಗ ರೆಡಿ ಮಾಡಿದ ಹಿಟ್ಿಗೆ ಹೂರಣ ತುಂಬಿಸಿ, ಕಚೋರಿ ಆಕಾರ ನೀಡಿ, ಕಾದ ಎಣ್ಣೆಯಲ್ಲಿ ಮಂದ ಉರಿಯಲ್ಲಿ ಕರಿದರೆ, ಬಟಾಣಿ ಕಚೋರಿ ರೆಡಿ.

- Advertisement -

Latest Posts

Don't Miss