Recipe: ಆಲೂಗಡ್ಡೆ ಫ್ರ್ಯಾಂಕೀಸ್ ರೆಸಿಪಿ: ಮಕ್ಕಳ ಡಬ್ಬಕ್ಕೆ ಉತ್ತಮ ಆಯ್ಕೆ

Recipe: ಬೇಕಾಗುವ ಸಾಮಗ್ರಿ: 2 ಚಪಾತಿ, ಆಲೂಗಡ್ಡೆ ಪಲ್ಯ, ಅವಶ್ಯಕತೆ ಇದ್ದಲ್ಲಿ ಸಾಸ್, ಮೆಯೋನಿಸ್, ಈರುಳ್ಳಿ, ಕ್ಯಾಪ್ಸಿಕಂ.

ಮಾಡುವ ವಿಧಾನ: ಗೋದಿ ಹುಡಿ ಬಳಸಿ 2 ಚಪಾತಿ ಬಳಸಿ. ಬಳಿಕ ಆಲೂಗಡ್ಡೆ ಪಲ್ಯ ಮಾಡಲು, ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ, ಉದ್ದಿನಬೇಳೆ, ಹಸಿಮೆಣಸು, ಕರಿಬೇವಿನ ಎಲೆ, ಬೆಳ್ಳುಳ್ಳಿ, ಈರುಳ್ಳಿ, ಹಾಕಿ ಹುರಿಯಿರಿ.

ನಂತರ ಬೇಯಿಸಿದ ಬಟಾಣಿ, ಆಲೂಗಡ್ಡೆ, ಗರಂ ಮಸಾಲೆ, ಚಾಟ್ ಮಸಾಲೆ, ಧನಿಯಾ ಪುಡಿ, ಉಪ್ಪು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. ಬಳಿಕ ಧನಿಯಾ ಉದುರಿಸಿ.

ಈಗ ಚಪಾತಿ ಮೇಲೆ ಮೆಯೋನೀಸ್, ಸಾಸ್ ಹಾಕಿ ಸವರಿ, ಈ ಪಲ್ಯ ಹಾಕಿ, ಅದರ ಮೇಲೆ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಮಡಿಚಿದರೆ, ಆಲೂಗಡ್ಡೆ ಫ್ರ್ಯಾಂಕೀಸ್ ರೆಡಿ.

About The Author