Recipe: ಬೇಕಾಗುವ ಸಾಮಗ್ರಿ: ಕಾಲು ಕಪ್ ರಾಜ್ಮಾ, ಕಾಲು ಕಪ್ ಕಪ್ಪು ಕಡಲೆ, ಬ್ರೋಕಲಿ, ಕ್ಯಾಪ್ಸಿಕಂ, ಈರುಳ್ಳಿ, ಟೋಮ್ಯಾಟೋ, ಕ್ಯಾಬೇಜ್, ಸೌತೇಕಾಯಿ ಇದೆಲ್ಲವೂ ಸೇರಿ 1 ಚಿಕ್ಕ ಬೌಲ್ ಆದ್ರೆ ಸಾಕು. ಕಾಲು ಕಪ್ ಹುರಿದ ನೆಲಗಡಲೆ. ಇನ್ನು ಸಿಸನಿಂಗ್‌ಗೆ 1 ಸ್ಪೂನ್ ನಿಂಬೆರಸ, ಆಲಿವ್ ಎಣ್ಣೆ, ಅರ್ಥ ಸ್ಪೂನ್ ಪೆಪ್ಪರ್, ಆರೆಗ್ಯಾನೋ, ಅವಶ್ಯಕತೆ ಇದ್ದಷ್’’ು ಉಪ್ಪು.
ಮಾಡುವ ವಿಧಾನ: ರಾಜ್ಮಾ ಮತ್ತು ಕಡಲೆಯನ್ನು 6 ಗಂಟೆ ನೆನೆಸಿ, ಕುಕ್ಕರ್‌ಗೆ ಹಾಕಿ ಉಪ್ಪು ಮತ್ತು ನೀರಿನ ಜತೆ ಬೇಯಿಸಿ. ಬಳಿಕ ಬ್ರೋಕೋಲಿ, ಕ್ಯಾಪ್ಸಿಕಂ ಕಟ್ ಮಾಡಿ, ಸ್ಟೀಮ್ ಮಾಡಿ.
ಬಳಿಕ 1 ಬೌಲ್‌ನಲ್ಲಿ ಬಿಸಿ ನೀರು, ಪನೀರ್ ಹಾಕಿ ಸ್ವಲ್ಪ ಸಮಯ ಇರಿಸಿ. ಮಿಕ್ಸಿಂಗ್ ಬೌಲ್‌ಗೆ ಈರುಳ್ಳಿ, ಟೋಮ್ಯಾಟೋ, ಕ್ಯಾಬೇಜ್, ಸೌತೇಕಾಯಿ ಕಟ್ ಮಾಡಿ ಹಾಕಿ. ಇದಕ್ಕೆ ಬಿಸಿನೀರಿನಲ್ಲಿ ನೆನೆಸಿದ ಪನೀರ್, ಬೇಯಿಸಿದ ಕಡಲೆ ಮತ್ತು ರಾಜ್ಮಾ, ಸ್ಟೀಮ್ ಬರಿಸಿದ ಬ್ರೋಕಲಿ, ಕ್ಯಾಪ್ಸಿಕಂ, ಹುರಿದ ಶೇಂಗಾ, ಬೇಕಾದರೆ ಕೋರಿಯಾಂಡರ್, ಸೇರಿಸಿ ಮಿಕ್ಸ್ ಮಾಡಿ.
ಈ ಸಲಾಡ್‌ಗೆ ಈಗ ಸೀಸ್‌ನಿಂಗ್ ಮಾಡಲು ನಿಂಬೆರಸ, ಆಲಿವ್ ಎಣ್ಣೆ, ಪೆಪ್ಪರ್ ಪುಡಿ, ಆರೆಗ್ಯಾನೋ, ಉಪ್ಪು ಮಿಕ್ಸ್ ಮಾಡಿ, ಸೇರಿಸಿದ್ರೆ, ಸಲಾಡ್ ರೆಡಿ. ಇನ್ನೂ ರುಚಿಯಾಗಲು ನೀವು ಸಿಹಿ ಬೇಕಾದ್ರೆ ಜೇನುತುಪ್ಪ, ಖಾರಾ ಬೇಕಾದಲ್ಲಿ ಪುದೀನಾ ಚಟ್ನಿ ಬಳಸಬಹುದು.