Tuesday, September 16, 2025

Latest Posts

Recipe: ನೇರಳೆ ಹಣ್ಣಿನ ಪಾನೀಪುರಿ ರೆಸಿಪಿ

- Advertisement -

Recipe: ನೀವು ಪುದೀನಾ ಬಳಸಿ ಪಾನೀಪುರಿಯ ಪಾನಿ ತಯಾರಿಸಿರುತ್ತೀರಿ. ಆದರೆ ನೀವು ಯಾವತ್ತಾದರೂ ನೇರಳೆ ಹಣ್ಣಿನ ಪಾನೀಪುರಿ ತಿಂದಿದ್ದೀರಾ. ತಿಂದಿಲ್ಲವೆಂದಲ್ಲಿ ಇಂದೇ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿ: 1 ಬೌಲ್ ನೇರಳೆ ಹಣ್ಣು, 1 ಸ್ಪೂನ್ ಕಪ್ಪುಪ್ಪು, ಬಿಳಿ ಉಪ್ಪು, ಜೀರಿಗೆ ಪುಡಿ, ನಿಂಬೆರಸ, 1 ಹಸಿಮೆಣಸು, ಸಣ್ಣಗೆ ಕತ್ತರಿಸಿದ, ಪುದೀನಾ, ಕೊತ್ತೊಂಬರಿ ಸೊಪ್ಪು, ಐಸ್‌ಕ್ಯೂಬ್ಸ್.

ಮಾಡುವ ವಿಧಾನ: ನೇರಳೆ ಹಣ್ಣಿನ ಬೀಜ ತೆಗೆದು, ಬ್ಲೆಂಡರ್‌ಗೆ ಹಾಕಿ, ಅದರ ಜ್ಯೂಸ್ ಮಾಡಿ. ಅದನ್ನು 1 ಬೌಲ್‌ಗೆ ಹಾಕಿ, ಅದಕ್ಕೆ ಕಪ್ಪುಪ್ಪು, ಬಿಳಿ ಉಪ್ಪು, ಜೀರಿಗೆ ಪುಡಿ, ನಿಂಬೆರಸ, 1 ಮೆಣಸು, ಪುದೀನಾ, ಕೊತ್ತೊಂಬರಿ ಸೊಪ್ಪು,  ಐಸ್‌ಕ್ಯೂಬ್ಸ್, ಮಸಾಲಾ ಬೂಂದಿ ಹಾಾಕಿ ಮಿಕ್ಸ್ ಮಾಡಿದ್ರೆ ಪಾನಿ ರೆಡಿ.

ಈಗ ಪೂರಿ ಕರಿದು, ಆಲೂಗಡ್ಡೆ ಮಸಾಲೆ ತಯಾರಿಸಿ, ಈ ಜಾಮೂನ್ ಪಾನಿಯನ್ನು ಸೇರಿಸಿ, ಪಾನಿಪುರಿ ತಿನ್ನಿ.

- Advertisement -

Latest Posts

Don't Miss