Recipe: ರೆಸ್ಟೋರೆಂಟ್ ಶೈಲಿಯ ಕಾಶ್ಮೀರಿ ಪಲಾವ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅಕ್ಕಿ, 2 ಸ್ಪೂನ್ ತುಪ್ಪ, ಅವಶ್ಯಕತೆ ಇದ್ದಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮ್, ಪಿಸ್ತಾ, ನಿಮಗೆ ಯಾವ ಡ್ರೈಫ್ರೂಟ್ಸ್ ಬೇಕೋ ಆ ಡ್ರೈಫ್ರೂಟ್ಸ್, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಸ್ಟಾರ್ ಚಕ್ಕೆ, ಜೀರಿಗೆ, ಕಾಳುಮೆಣಸು, ಪಲಾವ್ ಎಲೆ, 1 ಆ್ಯಪಲ್, ದಾಳಿಂಬೆ, ದ್ರಾಕ್ಷಿ, ಅನಾನಸ್, 1 ಈರುಳ್ಳಿ, ತುರಿದ ಶುಂಠಿ, ಉಪ್ಪು. ಬೇಕಾದ್ದಲ್ಲಿ ಕೇಸರಿ ದಳ, ಸ್ವಲ್ಪ ಹಾಲು.

ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ತುಪ್ಪ ಹಾಕಿ, ಡ್ರೈಫ್ರೂಟ್ಸ್ ಹುರಿದುಕ“ಳ್ಳಿ. ಬಳಿಕ ಅದನ್ನು ಬದಿಗಿರಿಸಿ, ಅದೇ ಪ್ಯಾನ್‌ಗೆ ಮತ್ತೆ ತುಪ್ಪ ಹಾಕಿ, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಸ್ಟಾರ್ ಚಕ್ಕೆ, ಜೀರಿಗೆ, ಕಾಳುಮೆಣಸು, ಪಲಾವ್ ಎಲೆ, ಈರುಳ್ಳಿ, ತುರಿದ ಶುಂಠಿ ಹಾಕಿ ಹುರಿಯಿರಿ.

ಬಳಿಕ ಕ್ಲೀನ್ ಮಾಡಿದ ಅಕ್ಕಿ ಹಾಾಕಿ ಮತ್ತೆ ಸ್ವಲ್ಪ ಹುರಿದು, ಬೇಕಾದಷ್ಟು ನೀರು ಹಾಕಿ ಅನ್ನ ಬೇಯಿಸಿ. ಅನ್ನ ಅರ್ಧ ಬೇಂದ ಬಳಿಕ ಅದಕ್ಕೆ ಕಾಲು ಮತ್ತು ಕೇಸರಿ ದಳ ಸೇರಿಸಿ. ಬೇಕಾದರೆ ಕಸ್ಟರ್ಡ್ ಪುಡಿ ಕೂಡ ಹಾಕಬಹುದು.

ಇದೆಲಲ ಹಾಕಿ ಆದ ಬಳಿಕ ಅನ್ನ ಬೇಯಿಸಿ. ಎಲ್ಲ ರೆಡಿಯಾದ ಬಳಿಕ ಗ್ಯಾಸ್ ಆಫ್ ಮಾಡಿ, ದಾಳಿಂಬೆ, ಆ್ಯಪಲ್, ದ್ರಾಕ್ಷಿ, ಅನಾನಸ್, ಹುರಿದ ಡ್ರೈಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿದ್ರೆ ಕಾಶ್ಮೀರಿ ಪಲಾವ್ ರೆಡಿ.

About The Author