Recipe: ಬೇಕಾಗುವ ಸಾಮಗ್ರಿ: ಪನೀರ್, 1 ಸ್ಪೂನ್ ಖಾರದ ಪುಡಿ, ಅರಿಶಿನ, ಧನಿಯಾ ಪುಡಿ, ಗರಂಮಸಾಲೆ, ಉಪ್ಪು, 3 ಕಾಲು ಕಪ್ ಮ“ಸರು, 1 ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಕಾಲು ಕಪ್ ಕಾರ್ನ್ ಫ್ಲೋರ್, ಕರಿಯಲು ಎಣ್ಣೆ, ಸ್ವಲ್ಪ ಹಿಂಗು, 2 ಹಸಿಮೆಣಸು, Tomato ಸಾಸ್, ಕರಿಬೇವು.
ಮಾಡುವ ವಿಧಾನ: 1 ಮಿಕ್ಸಿಂಗ್ ಬೌಲ್‌ನಲ್ಲಿ ಪನೀರ್, ಖಾರದ ಪುಡಿ, ಅರಿಶಿನ, ಧನಿಯಾಪುಡಿ, ಗರಂಮಸಾಲೆ, ಉಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್, ಕಾರ್ನ್ ಫ್ಲೋರ್, ಕರ್ಡ್ ಹಾಕಿ ಮಿಕ್ಸ್ ಮಾಡಿ 10 ನಿಮಿಷ ಬದಿಗಿರಿಸಿ.
ಬಳಿಕ ಕಾದ ಎಣ್ಣೆಯಲ್ಲಿ ಈ ಮಿಶ್ರಣವನ್ನು ಹಾಕಿ, ಬಜ್ಜಿಯ ರೀತಿ ಕರಿಯಿರಿ. ಬಳಿಕ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಹಿಂಗು, Tomato ಸಾಸ್, ಕರಿಬೇವು ಎಲ್ಲವನ್ನೂ ಹಾಕಿ ಹುರಿಯಿರಿ. ಬಳಿಕ ಕರಿದ ಪನೀರ್‌ನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ, ಪನೀರ್ 65 ರೆಡಿ. ಬರ್ತ್‌ಡೇ ಪಾರ್ಟಿ, ಇವ್‌ನಿಂಗ್ ಸ್ನ್ಯಾಕ್ಸ್ ಆಗಿ ಇದನ್ನ ಬಳಸಬಹುದು.




