- Advertisement -
ಬೇಕಾಗುವ ಸಾಮಗ್ರಿ: ಸಣ್ಣ ಬೌಲ್ ಕಲ್ಲಂಗಡಿ ಹಣ್ಣು, ಸ್ವಲ್ಪ ಪುದೀನಾ, ಅರ್ಧ ನಿಂಬೆ ರಸ, 1 ಸ್ಪೂನ್ ರೋಸ್ ಸಿರಪ್, ಸ್ವಲ್ಪ ಕಪ್ಪುಪ್ಪು, 1 ಸ್ಪೂನ್ ನೆನೆಸಿದ ಬೆಸಿಲ್ ಸೀಡ್ಸ್, ಐಸ್.
ಮಾಡುವ ವಿಧಾನ: ಜ್ಯೂಸ್ ಜಾರ್‌ಗೆ ಕಲ್ಲಂಗಡಿ ಹಣ್ಣು, ಪುದೀನಾ, ನಿಂಬೆರಸ, ರೋಸ್ ಸಿರಪ್, ಕಪ್ಪುಪ್ಪು ಹಾಕಿ ಜ್ಯೂಸ್ ತಯಾರಿಸಿ. ನಂತರ ಗ್ಲಾಸ್‌ಗೆ ಬೆಸಿಲ್ ಸೀಡ್ಸ್, ಐಸ್ ಹಾಕಿ, ಈ ಜ್ಯೂಸ್ ಹಾಕಿ ಸರ್ವ್ ಮಾಡಿ.
ಕಲ್ಲಂಗಡಿ ಹಣ್ಣಿನ ಐಸ್ ಬಾಲ್ಸ್: ಕಲ್ಲಂಗಡಿ ಹಣ್ಣನ್ನು ತುಂಡು ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ. ಇದರ ಜತೆ ಪೆಪ್ಪರ್ ಪುಡಿ, ಕಪ್ಪುಪ್ಪು ಹಾಕಿ ಮಿಕ್ಸ್ ಮಾಡಿ, ಪ್ಯೂರಿ ತಯಾರಿಸಿ. ನಂತರ ಇದನ್ನು ಗೋಲಾಕಾರದ ಐಸ್ ಟ್ರೇಗೆ ಹಾಕಿ, ಫ್ರೀಜರ್‌ನಲ್ಲಿರಿಸಿದ್ರೆ ಐಸ್ ಬಾಲ್ಸ್ ರೆಡಿ. ಇದನ್ನು ಜ್ಯೂಸ್ ಹಾಕಿ ಸವಿಯಬಹುದು.
- Advertisement -

