Friday, December 6, 2024

Latest Posts

Recipe: ಸಜ್ಜಿಗೆ ರೊಟ್ಟಿ (ರವಾ ತಾಲಿಪಿಟ್ಟು) ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸಜ್ಜಿಗೆ (ರವಾ), ಅರ್ಧ ಕಪ್ ಸೌತೇಕಾಯಿ ತುರಿ, 2 ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಕರಿಬೇವು, 3 ಹಸಿಮೆಣಸು, ಕೊಂಚ ಕ್ಯಾರೆಟ್ ತುರಿ, ಕೊಂಚ ಹಿಂಗು, ರುಚಿಗೆ ತಕ್ಕಷ್ಟು ಉಪ್ಪು, ರೊಟ್ಟಿ ಬೇಯಿಸಲು ಬೇಕಾದಷ್ಟು ಎಣ್ಣೆ ಅಥವಾ ತುಪ್ಪ.

ಮಾಡುವ ವಿಧಾನ: ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ರವಾ, ಸೌತೇಕಾಯಿ ತುರಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ಹಸಿಮೆಣಸು, ಕ್ಯಾರೆಟ್ ತುರಿ, ಹಿಂಗು, ಉಪ್ಪನ್ನು ಸೇರಿಸಿ, ಮಿಕ್ಸ್ ಮಾಡಿ.

ಇದನ್ನು 15 ನಿಮಿಷ ಹಾಗೆ ಇರಿಸಿ, ಬಳಿಕ ರೊಟ್ಟಿ ತಟ್ಟಿ, ಪ್ಯಾನ್ ಬಿಸಿ ಮಾಡಿ, ಎಣ್ಣೆ ಸವರಿ, ರೊಟ್ಟಿ ಬೇಯಿಸಬೇಕು. ಕಾಯಿ ಚಟ್ನಿಯೊಂದಿಗೆ ಈ ರೊಟ್ಟಿ ಸವಿಯಲು ಚೆನ್ನಾಗಿರುತ್ತದೆ.

- Advertisement -

Latest Posts

Don't Miss