Thursday, December 5, 2024

Latest Posts

ಗಾಢವಾದ ನಿದ್ರೆ ಮಾಡಬೇಕು ಅಂದ್ರೆ, ಈ ಟಿಪ್ಸ್ ಅನುಸರಿಸಿ.

- Advertisement -

Health Tips: ಕೆಲವೊಬ್ಬರಿಗೆ ರಾತ್ರಿ ಎಷ್ಟೇ ಬೇಗ ಮಲಗಿದರೂ, ಎಷ್ಟೇ ಅಚ್ಚುಕಟ್ಟಾಗಿ ಮಲಗಿದರೂ, ತಂಪು ಗಾಳಿ ಬರುತ್ತಿದ್ದರೂ, ಚೆಂದದ ಹಾಸಿಗೆ ಇದ್ದರೂ, ಕಣ್ತುಂಬ ನಿದ್ರೆ ಮಾತ್ರ ಬರುವುದಿಲ್ಲ. ಇದು ಯಾವುದೋ ಖಾಯಿಲೆಗೆ ಮುನ್ನುಡಿ ಅಂತಲೂ ಹೇಳಬಹುದು. ಹಾಗಾಗಿ ಇಂದು ನಾವು ಗಾಢವಾದ ನಿದ್ರೆ ಬರಬೇಕು ಅಂದ್ರೆ ನಾವು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.

ಮೊದಲ ಟಿಪ್ಸ್ ಅಂದ್ರೆ ಧ್ಯಾನ ಮಾಡುವುದು. ನೀವು ಧ್ಯಾನ ಮಾಡುವುದನ್ನು ಸರಿಯಾಗಿ ಕಲಿತು, ಧ್ಯಾನ ಮಾಡಿದರೆ, ಅದರಿಂದ ನಿಮಗೆ ಹಲವು ಉಪಯೋಗವಾಗುತ್ತದೆ. ಧ್ಯಾನ ಮಾಡುವುದೆಂದರೆ, ಸುಮ್ಮನೆ ಕುಳಿತುಕೊಳ್ಳುವುದಲ್ಲ. ಎಲ್ಲವನ್ನೂ ಮರೆತು, ಒಂದು ವಿಷಯದಲ್ಲಿ ಏಕಾಗೃತೆ ಇರಿಸಿಕೊಳ್ಳುವುದು. ದೇವರಲ್ಲಿ ಏಕಾಗೃತೆ ವಹಿಸಿ, ಧ್ಯಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮಾನಸಿಕ ಒತ್ತಡ ತಡಿಮೆಯಾಗುತ್ತದೆ.

ಹೆಚ್ಚು ಟಿವಿ ನೋಡುವುದು, ಲ್ಯಾಪ್‌ಟಾಪ್ ಬಳಸುವುದು, ಟಿವಿ ನೋಡುವುದು ಕೂಡ ನಿಮ್ಮ ನಿದ್ರಾಭಂಗಕ್ಕೆ ಕಾರಣವಾಗುತ್ತದೆ. ಹಾಗಾಗಿ ಸ್ಕ್ರೀನ್ ಟೈಮ್ ಕಡಿಮೆ ಮಾಡಿ. ಇನ್ನು ಎಲ್ಲ ವಿಷಯಗಳ ಬಗ್ಗೆ ಟೆನ್ಶನ್ ತೆಗೆದುಕೊಳ್ಳುವ ಸ್ವಭಾವ ಇರುವವರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಗಾಗಿ ಟೆನ್ಶನ್ ಫ್ರೀಯಾಗಿ ಇರುವುದನ್ನು ಕಲಿಯಿರಿ.

ಇನ್ನೊಂದು ವಿಚಾರ ಅಂದ್ರೆ, ನಿಮಗೆ ಹೆಚ್ಚು ಬೆನ್ನು ನೋವಾಗುತ್ತಿದೆ. ಸುಸ್ತಾಗುತ್ತಿದೆ. ಸರಿಯಾಗಿ ನಿದ್ರೆಯೇ ಬರುತ್ತಿಲ್ಲವೆಂದಲ್ಲಿ, ನೀವು ಹೆಚ್ಚು ಸಕ್ಕರೆ ಪದಾರ್ಥ ತಿನ್ನುತ್ತಿದ್ದೀರಿ ಎಂದರ್ಥ. ಹಾಗಾಗಿ ಸಕ್ಕರೆ ಮತ್ತು ಸಿಹಿ ತಿಂಡಿ ತಿನ್ನುವುದನ್ನು ಕಡಿಮೆ ಮಾಡಿ.

ಏನು ಮಾಡಿದ್ರೂ ನಿದ್ರೆನೇ ಬರುತ್ತಿಲ್ಲವೆಂದಲ್ಲಿ, ಅಥವಾ ನೀವು ಮುಟ್ಟು, ತಲೆನೋವು, ಹೊಟ್ಟೆನೋವು ಸೇರಿ ಯಾವುದಾದರೂ ನೋವನ್ನು ಅನುಭವಿಸುತ್ತೀದ್ದೀರಿ. ನಿದ್ರೆ ಬಂದರೆ, ಆ ಸಮಸ್ಯೆ ಸರಿ ಹೋಗುತ್ತದೆ ಎಂದಾದಲ್ಲಿ, ಜೋರಾಗಿ ಉಸಿರಾಡಲು ಪ್ರಾರಂಭಿಸಿ. ಹೀಗೆ ಮಾಡಿದ ಸ್ವಲ್ಪ ಹೊತ್ತಿಗೆ ನಿಮಗೆ ಗಾಢವಾದ ನಿದ್ರೆ ಬರಲು ಪ್ರಾರಂಭಿಸುತ್ತದೆ. ಸತತವಾಗಿ ಉಸಿರಾಡಲು ಕಷ್ಟವಾದರೆ, ಸ್ವಲ್ಪ ಗ್ಯಾಪ್ ಕೊಟ್ಟು ಉಸಿರಾಡಿ. ನಿಧಾನವಾಗಿ ಉಸಿರಾಡಿ.

ಕೊನೆಯದಾಗಿ ದೇಹವನ್ನು ತಂಪಾಗಿರಿಸಿ. ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ನಿದ್ದೆ ಕೂಡ ಸರಿಯಾಗಿ ಬರುವುದಿಲ್ಲ. ಪದೇ ಪದೇ ಎಚ್ಚರಾಾಗುತ್ತದೆ. ಹಾಗಾಗಿ ದೇಹವನ್ನು ತಂಪಾಗಿ ಇರಿಸಿಕೊಳ್ಳಿ. ತಂಪಾದ ಆಹಾರ ಸೇವನೆ ಮಾಡಿ. ಎಳನೀರು, ತರಕಾರಿ, ಮಜ್ಜಿಗೆ, ಮೊಸರು ಸೇವಿಸಿ. ಊಟದಲ್ಲಿ ತುಪ್ಪವಿರಲಿ. ತುಪ್ಪ ಕೂಡ ನಿದ್ರಾಹೀನತೆ ಸಮಸ್ಯೆ ನಿವಾರಿಸುತ್ತದೆ.

- Advertisement -

Latest Posts

Don't Miss