Recipe: ಸಂಕ್ರಾಂತಿ ಹಬ್ಬದಂದು ನೀವು ಈ ಎಳ್ಳಿನ ಉಂಡೆ ಅಥವಾ ಚಿಕ್ಕಿಯನ್ನು ಮಾಡಬಹುದು.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಶೇಂಗಾ, 1 ಕಪ್ ಎಳ್ಳು, 1ವರೆ ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ.
ಮಾಡುವ ವಿಧಾನ: ಎಳ್ಳು ಮತ್ತು ಶೇಂಗಾವನ್ನು ಬೇರೆ ಬೇರೆಯಾಗಿ, ಮಂದ ಉರಿಯಲ್ಲಿ ಹುರಿಯಬೇಕು. ಬಳಿಕ ತರಿ ತರಿಯಾಗಿ ಪುಡಿ ಮಾಡಬೇಕು.
ನಂತರ ಪ್ಯಾನ್ ಬಿಸಿ ಮಾಡಿ, ತುಪ್ಪ, ಬೆಲ್ಲ, ಅವಶ್ಯಕತೆ ಇರುವಷ್ಟು ನೀರು ಹಾಕಿ ಪಾಕ ಬರಿಸಬೇಕು. ಬಳಿಕ ಏಲಕ್ಕಿ ಪುಡಿ, ಹುರಿದ ಮಿಶ್ರಣ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಬೇಕು.
ಬಳಿಕ ಬಿಸಿ ಇರುವಾಗಲೇ ನೀವು ಇದರಿಂದ ಉಂಡೆ ಮಾಡಬಹುದು. ಅಥವಾ ತುಪ್ಪ ಸವರಿದ ತಟ್ಟೆಗೆ ಹಾಕಿ, ಚಿಕ್ಕಿ ಕೂಡ ಮಾಡಬಹುದು. ಮಕರ ಸಂಕ್ರಾಂತಿಗೆ ಇದನ್ನು ಹೆಚ್ಚಾಗಿ ತಯಾರಿಸುತ್ತಾರೆ. ಸಂಕ್ರಾಂತಿ ಚಳಿಗಾಲದಲ್ಲಿ ಬರುತ್ತದೆ. ಮತ್ತು ಚಳಿಗಾಲದಲ್ಲಿ ಎಳ್ಳಿನ ಉಂಡೆ, ಚಿಕ್ಕಿ ಮಾಡಲು ಕಾರಣವೇನೆಂದರೆ, ತಂಪಿನ ವಾತಾವರಣದಲ್ಲಿ, ದೇಹದಲ್ಲಿ ಉಷ್ಣತೆಯ ಪ್ರಮಾಣ ಸರಿದೂಗಿಸಿ, ಆರೋಗ್ಯ ಉತ್ತಮವಾಗಿ ಇರಿಸಲು ಇದರ ಸೇವನೆ ಉತ್ತಮ.




