Recipe: ಬೇಕಾಗುವ ಸಾಮಗ್ರಿ: 1 ಕಪ್ ಶೇಂಗಾ, 1 ಕಪ್ ಎಳ್ಳು, 1 ಕಪ್ ಬೆಲ್ಲ, ತುಪ್ಪ, ಸ್ವಲ್ಪ ಏಲಕ್ಕಿ ಪುಡಿ.
ಮಾಡುವ ವಿಧಾನ: ಶೇಂಗಾ ಮತ್ತು ಎಳ್ಳನ್ನು ಎಣ್ಣೆ ಹಾಕದೇ ಹಾಗೆ ಹುರಿಯಿರಿ. ಬಳಿಕ ಎರಡೂ ಸಪರೇಟ್ ಆಗಿ ತರಿ ತರಿಯಾಗಿ ಪುಡಿ ಮಾಡಿ. ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ ಬೆಲ್ಲ ಕರಗಿಸಿ, ಹೀಗೆ ಮಾಡುವಾಗ 1 ಸ್ಪೂನ್ ನೀರು ಹಾಕಿ. ಬೆಲ್ಲ ಬಬಲ್ಸ್ ಬಂದ ಬಳಿಕ ಏಲಕ್ಕಿ ಪುಡಿ ಮತ್ತು ಹುರಿದು ಪುಡಿ ಮಾಡಿದ ಎಳ್ಳು, ಶೇಂಗಾ ಹಾಕಿ ಮಿಕ್ಸ್ ಮಾಡಿ.
ತುಪ್ಪ ಸವರಿದ ಪ್ಲೇಟ್ ಗೆ ರೆಡಿ ಮಾಡಿದ ಮಿಕ್ಸ್ ಹಾಕಿ, ಸ್ಪ್ರೆಡ್ ಮಾಡಿ. ಬಳಿಕ ಕಟ್ ಮಾಡಿದ್ರೆ, ಶೇಂಗಾ-ಎಳ್ಳಿನ ಚಿಕ್ಕಿ ರೆಡಿ. ನೀವು ಹಬ್ಬದ ಸಂದರ್ಭದಲ್ಲಿ, ಚಳಿಗಾಲದಲ್ಲಿ, ಮಕ್ಕಳಿಗೆ ಶಾಲೆಗೆ ಕಳುಹಿಸಲು ಈ ಸಿಹಿ ತಿಂಡಿ ಮಾಡಬಹುದು.




