Recipe: ಸೋಯಾ-ಪಾಲಕ್ ಮಸಾಲೆ ರೆಸಿಪಿ..

Recipe: ಬೇಕಾಗುವ ಸಾಮಗ್ರಿ: 1 ಕಟ್ಟು ಪಾಲಕ್, 1 ಬೌಲ್ ಸೋಯಾ ಚಂಕ್ಸ್, 4ಹಸಿಮೆಣಸು, 1 ಕಪ್ ಕರ್ಡ್, 1 ಸ್ಪೂನ್ ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ, ಸ್ವಲ್ಪ ಅರಿಶಿನ, 1 ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್,  ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಪೆಪ್ಪರ್, ಜೀರಿಗೆ, 4 ಸ್ಪೂನ್ ಎಣ್ಣೆ, ಕಸೂರಿ ಮೇಥಿ, ಉಪ್ಪು.

ಮಾಡುವ ವಿಧಾನ: ಸೋಯಾ ಚಂಕ್ಸನ್ನು ಸ್ವಲ್ಪ ಸಮಯ ಬಿಸಿ ನೀರಿನಲ್ಲಿ ನೆನೆಸಿಡಿ. ಸೋಯಾ ಚಂಕ್ಸ್ ಸಾಫ್ಟ್ ಆದ ಬಳಿಕ, ನೀರಿನಿಂದ ಬೇರ್ಪಡಿಸಿ ಇಡಿ. ಬಳಿಕ ಪಾಲಕನ್ನು ಕ್ಲೀನ್ ಮಾಡಿ, ಕುದಿಯುವ ನೀರಿಗೆ ಹಾಕಿ 2 ನಿಮಿಷ ಬೇಯಿಸಿ ಬಳಿಕ ತೆಗೆದು, ಐಸ್ ನೀರಿನಲ್ಲಿ ಕ್ಲೀನ್ ಮಾಡಿ ಇರಿಸಿ.

ಬಳಿಕ ಪಾಲಕ್‌ನ್ನು ಮಿಕ್ಸಿಜಾರಿಗೆ ಹಾಕಿ, ಹಸಿಮೆಣಸು ಹಾಕಿ ಪೇಸ್ಟ್ ತಯಾರಿಸಿ. ಈಗ ಬೌಲ್ ನಲ್ಲಿ ಕರ್ಡ್, ಧನಿಯಾ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ, ಸ್ವಲ್ಪ ಅರಿಶಿನ ಹಾಕಿ ಮಿಕ್ಸ್ ಮಾಡಿ.

ಈಗ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಚಕ್ಕೆ, ಲವಂಗ, ಏಲಕ್ಕಿ, ಪೆಪ್ಪರ್, ಜೀರಿಗೆ, ಪಲಾವ್ ಎಲೆ, ಜೀರಿಗೆ, ಮೆಣಸು ಎಲ್ಲವನ್ನು ಹಾಕಿ ಹುರಿಯಿರಿ. ನಂಂತರ ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಮತ್ತೆ ಹುರಿಯಿರಿ. ಬಳಿಕ ಈರುಳ್ಳಿ, ಟೋಮೆಟೋ ಹಾಕಿ ಹುರಿಯಿರಿ.

ನಂತರ ಉಪ್ಪು, ಕಿಚನ್ ಕಿಂಗ್ ಮಸಾಲೆ, ಕರ್ಡ್ ಮಿಶ್ರಣ, ಪಾಲಕ್ ಪೇಸ್ಟ್ ಹಾಕಿ ಮಿಕ್ಸ್ ಮಾಡಿ, ಹುರಿಯಿರಿ. ಅರ್ಧ ಕಪ್ ನೀರು ಹಾಕಿ ಮಂದ ಉರಿಯಲ್ಲಿ 3 ನಿಮಿಷ ಬೇಯಿಸಿ. ಬಳಿಕ ಸೋಯಾ ಚಂಕ್ಸ್, ಬೇಕಾದ್ರೆ ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಕಸೂರಿ ಮೇಥಿ ಹಾಕಿ ಮಿಕ್ಸ್ ಮಾಡಿ, 2 ನಿಮಿಷ ಮಂದ ಉರಿಯಲ್ಲಿ ಬೇಯಿಸಿದ್ರೆ, ಪಾಲಕ್-ಸೋಯಾ ಗ್ರೇವಿ ರೆಡಿ.

About The Author