- Advertisement -
Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರುಬೇಳೆ, ಚಿಕ್ಕ ತುಂಡು ಶುಂಠಿ, 3 ಹಸಿಮೆಣಸು, ಕರಿಬೇವು, ಕೊತ್ತೊಂಬರಿ ಸೊಪ್ಪು, ಖಾರದಪುಡಿ, ಅರಿಷಿನ, ಉಪ್ಪು, ಗರಂ ಮಸಾಲೆ, 1 ಸ್ಪೂನ್ ಜೀರಿಗೆ, ಸ್ವಲ್ಪ ವೋಮ, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಕರಿಯಲು ಎಣ್ಣೆ.
ಮಾಡುವ ವಿಧಾನ: ಹೆಸರುಬೇಳೆಯನ್ನು 4 ತಾಸು ನೆನೆಸಿ ಕ್ಲೀನ್ ಮಾಡಿ. ಬಳಿಕ ನೀರು ಹಾಕದೇ, ಶುಂಠಿ ಜತೆ ತರಿತರಿಯಾಗಿ ರುಬ್ಬಿಕ“ಳ್ಳಿ. ಬಳಿಕ ಈ ಮಿಶ್ರಣಕ್ಕೆ, ಹಸಿಮೆಣಸು, ಕರಿಬೇವು, ಕೊತ್ತೊಂಬರಿ ಸೊಪ್ಪು, ಖಾರದಪುಡಿ, ಅರಿಷಿನ, ಉಪ್ಪು, ಗರಂ ಮಸಾಲೆ, ಜೀರಿಗೆ, ಸ್ವಲ್ಪ ವೋಮ, ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಹಾಕಿ ಮಿಕ್ಸ್ ಮಾಡಿ, ಕಾದ ಎಣ್ಣೆಯಲ್ಲಿ ಕರಿದರೆ, ಹೆಸರುಬೇಳೆ ವಡಾ, ಅಥವಾ ಬಜ್ಜಿ ರೆಡಿ. ಇದನ್ನು ಸಾಸ್ ಜತೆ ಸವಿಯಬಹುದು.
- Advertisement -