- Advertisement -
Recipe: ಬೇಕಾಗುವ ಸಾಮಗ್ರಿ: 1 ಬದನೆ, 1 ಆಲೂಗಡ್ಡೆ, 2 ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ, ಜೀರಿಗೆ, ಅರಿಶಿನ, ಖಾರದ ಪುಡಿ, ಧನಿಯಾಪುಡಿ, ಜೀರಿಗೆ ಪುಡಿ, 3 ಟೋಮೆಟೋ, ಕಸೂರಿ ಮೇಥಿ, ಉಪ್ಪು.
ಮಾಡುವ ವಿಧಾನ: ಪ್ಯಾನ್‌ಗೆ ಎಣ್ಣೆ ಹಾಕಿ, ಆಲೂಗಡ್ಡೆ ಮತ್ತು ಬದನೆಯನ್ನು ಸಪರೇಟ್ ಆಗಿ ಹುರಿಯಿರಿ. ಮತ್ತೆ ಪ್ಯಾನ್‌ಗೆ ಎಣ್ಣೆ ಹಾಕಿ, ಜೀರಿಗೆ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ತರಿ ತರಿಯಾಗಿ ಜಜ್ಜಿ ಸೇರಿಸಿ, ಹುರಿಯಿರಿ.
ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಟೋಮೆಟೋ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಆಗಲೇ ಹುರಿದ ಆಲೂಗಡ್ಡೆ ಮತ್ತು ಬದನೆ ಹಾಕಿ ಮಿಕ್ಸ್ ಮಾಡಿ.
ನಂತರ ನಿರು ಹಾಕಿ, ಮುಚ್ಚಳ ಮುಚ್ಚಿ 5 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ಬಳಿಕ ಕಸೂರಿನ ಮೇಥಿ ಹಾಕಿ ಮಿಕ್ಸ್ ಮಾಡಿದ್ರೆ ಆಲೂ-ಬದನೆ ಪಲ್ಯ ರೆಡಿ.
- Advertisement -